
ಗಾಂಜಾ
ನವದೆಹಲಿ: ಇಲ್ಲಿನ ಇಂದಿರಾ ಗಾಂಧಿ ಅಂತರರಾಷ್ಟ್ರೀಯ (ಐಜಿಐ) ವಿಮಾನ ನಿಲ್ದಾಣದಲ್ಲಿ ₹10 ಕೋಟಿಗೂ ಹೆಚ್ಚು ಮೌಲ್ಯದ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಕಸ್ಟಮ್ಸ್ ಇಲಾಖೆ ತಿಳಿಸಿದೆ.
ಪ್ರಕರಣದಲ್ಲಿ ಓರ್ವನನ್ನು ಬಂಧಿಸಲಾಗಿದ್ದು, ರಾಷ್ಟ್ರ ರಾಜಧಾನಿಯಲ್ಲಿ ಹೊಸ ವರ್ಷದ ವೇಳೆಯಲ್ಲಿ ಭಾರಿ ಕಾರ್ಯಾಚರಣೆ ನಡೆದಿದೆ.
ಡಿಸೆಂಬರ್ 31ರಂದು ಬ್ಯಾಂಕಾಕ್‌ನಿಂದ ಆಗಮಿಸಿದ್ದ ಆರೋಪಿಯು ಕೊಲಂಬೊಗೆ ತೆರಳಬೇಕಿತ್ತು. ವಲಸೆ ಕ್ಲಿಯರನ್ಸ್ ಬಳಿಕ ಚೆಕ್-ಇನ್ ಬ್ಯಾಗೇಜ್ ಅನ್ನು ಕೆಳಗಿಳಿಸುವಂತೆ ಪ್ರಯಾಣಿಕನು ವಿನಂತಿಸಿದನು.
ಈ ವೇಳೆ ಅನುಮಾನಗೊಂಡ ಕರ್ತವ್ಯದಲ್ಲಿದ್ದ ಕಸ್ಟಮ್ಸ್ ಅಧಿಕಾರಿಗಳು ಪ್ರಯಾಣಿಕ ಹಾಗೂ ಆತನ ಸಾಮಾಗ್ರಿಗಳನ್ನು ಹೆಚ್ಚುವರಿ ತಪಾಸಣೆಗೆ ಒಳಪಡಿಸಿದರು.
ಈ ಸಂದರ್ಭದಲ್ಲಿ ಕಪ್ಪು ಬಣ್ಣದ ಟ್ರಾಲಿ ಬ್ಯಾಗ್‌ನಿಂದ ಗಾಂಜಾ ಎಂದು ಶಂಕಿಸಲಾದ ಹಸಿರು ಬಣ್ಣದ ಪಾಲಿಥಿನ್ ಪ್ಯಾಕೆಟ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಕಸ್ಟಮ್ಸ್ ಅಧಿಕಾರಿಗಳು ತಿಳಿಸಿದ್ದಾರೆ. ಇದರ ತೂಕ 10,275 ಗ್ರಾಂ ಆಗಿತ್ತು.
ವಶಪಡಿಸಿಕೊಂಡ ಗಾಂಜಾದ ಮಾರುಕಟ್ಟೆ ಮೌಲ್ಯ ಅಂದಾಜು ₹10.27 ಕೋಟಿ ಆಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.