ADVERTISEMENT

ಉತ್ತರಾಖಂಡ: ಹುತಾತ್ಮ ಯೋಧರ ಕುಟುಂಬಕ್ಕೆ ಪರಿಹಾರ ಮೊತ್ತ ₹50 ಲಕ್ಷಕ್ಕೆ ಹೆಚ್ಚಳ

ಪಿಟಿಐ
Published 3 ಜೂನ್ 2025, 2:26 IST
Last Updated 3 ಜೂನ್ 2025, 2:26 IST
<div class="paragraphs"><p>ಹಣ </p></div>

ಹಣ

   

ಡೆಹರಾಡೂನ್‌: ಹುತಾತ್ಮ ಸೈನಿಕರ ಕುಟುಂಬಗಳಿಗೆ ನೀಡಲಾಗುವ ಪರಿಹಾರ ಮೊತ್ತವನ್ನು ₹10 ಲಕ್ಷದಿಂದ ₹50 ಲಕ್ಷಕ್ಕೆ ಹೆಚ್ಚಿಸಿ ಉತ್ತರಾಖಂಡ ಸರ್ಕಾರ ಆದೇಶಿಸಿದೆ.

ಈ ಕುರಿತು ಪ್ರಕಟಣೆ ಹೊರಡಿಸಿರುವ ಮುಖ್ಯಮಂತ್ರಿ ಪುಷ್ಕರ್‌ ಸಿಂಗ್ ಧಾಮಿ, ಈ ಆದೇಶವು 2024ರ ಜುಲೈನಿಂದ ಅನ್ವಯವಾಗಲಿದೆ ಎಂದು ತಿಳಿಸಿದ್ದಾರೆ.

ADVERTISEMENT

ಸರ್ಕಾರದ ಈ ಕ್ರಮಕ್ಕೆ ಸೈನಿಕ ಕಲ್ಯಾಣ ಸಚಿವ ಗಣೇಶ್‌ ಜೋಶಿ ಅವರು ಕೃತಜ್ಞತೆ ಸಲ್ಲಿಸಿದ್ದಾರೆ. ಈ ನಿರ್ಧಾರವು ರಾಜ್ಯ ಸರ್ಕಾರಕ್ಕೆ ಹುತಾತ್ಮ ಯೊಧರ ಬಗ್ಗೆ ಇರುವ ಸಂವೇದನೆ ಮತ್ತು ಗೌರವವನ್ನು ಸೂಚಿಸುತ್ತದೆ. ಉತ್ತರಾಖಂಡ ವೀರರ ನಾಡು, ರಾಜ್ಯದ ಹೆಚ್ಚಿನ ಸಂಖ್ಯೆಯ ಯುವಕರು ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಹೇಳಿದ್ದಾರೆ.

‘ಹುತಾತ್ಮರ ಕುಟುಂಬಕ್ಕೆ ₹50 ಲಕ್ಷ ಧನಸಹಾಯ ಖಂಡಿತವಾಗಿಯೂ ಸಾಮಾಜಿಕ ಮತ್ತು ಆರ್ಥಿಕ ಬಲವನ್ನು ಒದಗಿಸುತ್ತದೆ’ ಎಂದೂ ಅವರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.