ADVERTISEMENT

ನಟರಾದ ಮುಷ್ತಾಕ್ ಖಾನ್, ಸುನೀಲ್ ಪಾಲ್ ಅಪಹರಣ: ಮಾಸ್ಟರ್ ಮೈಂಡ್ ಬಂಧನ

ಪಿಟಿಐ
Published 23 ಡಿಸೆಂಬರ್ 2024, 10:04 IST
Last Updated 23 ಡಿಸೆಂಬರ್ 2024, 10:04 IST
<div class="paragraphs"><p>ಬಂಧನ </p></div>

ಬಂಧನ

   

(ಸಾಂದರ್ಭಿಕ ಚಿತ್ರ)

ಬಿಜ್ನೋರ್ (ಉತ್ತರ ಪ್ರದೇಶ): ಕಾರ್ಯಕ್ರಮವೊಂದಕ್ಕೆ ಆಹ್ವಾನಿಸುವ ನೆಪದಲ್ಲಿ ನಟ ಮುಷ್ತಾಕ್ ಖಾನ್ ಮತ್ತು ಹಾಸ್ಯನಟ ಸುನೀಲ್ ಪಾಲ್ ಅವರ ಅಪಹರಣದಲ್ಲಿ ಭಾಗಿಯಾಗಿದ್ದ ಗ್ಯಾಂಗ್‌ನ ಮಾಸ್ಟರ್ ಮೈಂಡ್ ಅನ್ನು ಉತ್ತರ ಪ್ರದೇಶ ಪೊಲೀಸರು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ಭಾನುವಾರ ತಡರಾತ್ರಿ ನಡೆದ ಎನ್‌ಕೌಂಟರ್‌ನಲ್ಲಿ ಗಾಯಗೊಂಡಿದ್ದ ಆರೋಪಿ ಲಾವಿ ಪಾಲ್ ಅಲಿಯಾಸ್ ರಾಹುಲ್ ಸೈನಿಯನ್ನು ಬಂಧಿಸಲಾಗಿದೆ.

ಅಕ್ಟೋಬರ್ 15ರಂದು ಆರೋಪಿಗಳು ರಾಹುಲ್ ಸೈನಿಯಂತೆ ನಟಿಸಿ ನಟ ಮುಷ್ತಾಕ್ ಖಾನ್ ಅವರನ್ನು ಭೇಟಿ ಮಾಡಿ ನವೆಂಬರ್ 20ರಂದು ಮೀರತ್‌ನಲ್ಲಿ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದರು. ₹25,000 ಮುಂಗಡ ಮತ್ತು ವಿಮಾನದ ಟಿಕೆಟ್ ನೀಡಿದ್ದರು.

‘ನವೆಂಬರ್ 20ರಂದು, ಮುಷ್ತಾಕ್ ಅವರನ್ನು ದೆಹಲಿ ವಿಮಾನ ನಿಲ್ದಾಣದಿಂದ ಕಾರಿನಲ್ಲಿ ಬಿಜ್ನೋರ್‌ಗೆ ಕರೆತಂದು, ಅಲ್ಲಿ ಲವಿ ಪಾಲ್‌ಗೆ ಸೇರಿದ ಚಹಶಿರಿಯಲ್ಲಿರುವ ಮನೆಯಲ್ಲಿ ಬಂಧಿಸಿಡಲಾಗಿತ್ತು ಎಂದು ಅವರು ತಿಳಿಸಿದ್ದಾರೆ.

ನವೆಂಬರ್ 21ರಂದು ಅಪಹರಣಕಾರರು ನಿದ್ದೆಯಲ್ಲಿರುವಾಗಿ ಮುಷ್ತಾಕ್ ಅಲ್ಲಿಂದ ತಪ್ಪಿಸಿಕೊಂಡು ಸಮೀಪದ ಮಸೀದಿಯಲ್ಲಿ ಆಶ್ರಯ ಪಡೆದಿದ್ದಾರೆ. ಅಲ್ಲಿಂದ ಅವರು ಸುರಕ್ಷಿತವಾಗಿ ಮನೆಗೆ ಹಿಂದಿರುಗಿದ್ದಾರೆ. ಬಳಿಕ, ಅವರ ಕಾರ್ಯಕ್ರಮ ನಿರ್ವಾಹಕ ಶಿವಂ ಯಾದವ್ ಪೊಲೀಸರಿಗೆ ದೂರು ನೀಡಿದ್ದರು ಎಂದು ಝಾ ಹೇಳಿದ್ದಾರೆ.

ಮೀರತ್‌ನಲ್ಲಿ ಪಾಲ್ ಅವರನ್ನು ಗುರಿಯಾಗಿಸಿಕೊಂಡು ಈ ಗ್ಯಾಂಗ್ ಅದೇ ರೀತಿಯ ಕಾರ್ಯಾಚರಣೆ ನಡೆಸಿತ್ತು ಎಂದೂ ಅವರು ಹೇಳಿದ್ದಾರೆ.

ಖಾನ್ ಅಪಹರಣದ ವೇಳೆ ಅವರ ಮೊಬೈಲ್ ಫೋನ್ ಬಳಸಿಕೊಂಡು ₹2.5 ಲಕ್ಷ ವಹಿವಾಟು ನಡೆಸಲಾಗಿದೆ. ಈ ಗ್ಯಾಂಗ್‌ನ 6 ಮಂದಿಯನ್ನು ಬಂಧಿಸಿದ್ದ ಪೊಲೀಸರು, ಲವಿ ಪಾಲ್‌ ಮತ್ತು ಇತರೆ ಮೂವರಿಗಾಗಿ ಹುಡುಕಾಟ ನಡೆಸುತ್ತಿದ್ದರು.

ಮಂದಾವರ್ ರಸ್ತೆಯ ಜೈನ್ ಫಾರ್ಮ್‌ಗೆ ಲವಿ ಪಾಲ್ ಮತ್ತು ಸೋದರ ಸಂಬಂಧಿ ಶುಭಂ ಬರುವ ಕುರಿತಂತೆ ಖಚಿತ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿದ ಪೊಲೀಸರು, ಬಂಧನಕ್ಕೆ ಮುಂದಾಗಿದ್ದರು. ಈ ವೇಳೆ ಅವರು ಗುಂಡಿನ ದಾಳಿ ನಡೆಸಿದ್ದು, ಠಾಣಾಧಿಕಾರಿ ಉದಯ್ ಪ್ರತಾಪ್ ಬುಲೆಟ್‌ ಪ್ರೂಫ್ ಜಾಕೆಟ್‌ಗೆ ಬುಲೆಟ್ ಬಡಿದಿದೆ. ಪೊಲೀಸ್ ಪ್ರತಿದಾಳಿಯಲ್ಲಿ ಲವಿ ಪಾಲ್‌ಗೆ ಗಾಯಗಳಾಗಿದ್ದವು. ಆದರೆ, ಶುಭಂ ತ‍್‍ಪ್ಪಿಸಿಕೊಂಡರು ಎಂದು ಝಾ ಹೇಳಿದ್ದಾರೆ. ಪಾಲ್ ಅವರನ್ನು ಬಂಧಿಸಿ ಜಿಲ್ಲಾಸ್ಪತ್ರೆಗೆ ಕರೆದೊಯ್ಯಲಾಗಿದೆ.

ಲವಿ ಪಾಲ್ ಬಳಿ ಒಂದು ಕಂಟ್ರ ಪಿಸ್ತೂಲ್, ಎರಡು ಕಾಟ್ರಿಡ್ಜ್ ಮತ್ತು ₹35,000 ಸುಲಿಗೆ ಹಣ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಲವಿ ಪಾಲ್ ಬಗ್ಗೆ ಮಾಹಿತಿ ನೀಡಿದವರಿಗೆ ₹25,000 ಬಹುಮಾನ ನೀಡುವುದಾಗಿ ಬಿಜ್ನೋರ್ ಮತ್ತು ಮೀರತ್ ಪೊಲೀಸರು ಘೋಷಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.