ADVERTISEMENT

ಟೀ ಸೇವಿಸಿದ ಬಳಿಕ ಇಬ್ಬರು ಸಾಧುಗಳು ಸಾವು, ಮತ್ತೊಬ್ಬರು ಆಸ್ಪತ್ರೆಗೆ ದಾಖಲು

ಪಿಟಿಐ
Published 22 ನವೆಂಬರ್ 2020, 8:25 IST
Last Updated 22 ನವೆಂಬರ್ 2020, 8:25 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮಥುರಾ: ತಾವು ತಂಗಿದ್ದೆಡೆ ಟೀ ಸೇವಿಸಿದ ಬಳಿಕ ಮಥುರಾದಲ್ಲಿ ಇಬ್ಬರು ಸಾಧುಗಳು ಅನುಮಾನಾಸ್ಪದವಾಗಿ ಮೃತಪಟ್ಟಿದ್ದು, ಮತ್ತೊಬ್ಬರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿರುವುದಾಗಿ ಶನಿವಾರ ಪೊಲೀಸರು ತಿಳಿಸಿದ್ದಾರೆ.

ಎಸ್‌ಎಸ್‌ಪಿ ಡಾ. ಗೌರವ್ ಗ್ರೋವರ್ ಮಾತನಾಡಿ, 60 ವರ್ಷದ ಗುಲಾಬ್ ಸಿಂಗ್ ಸ್ಥಳದಲ್ಲೇ ಮೃತಪಟ್ಟರೆ, ಸಾಧು ಶ್ಯಾಮ್ ಸುಂದರ್ (61) ಅವರನ್ನು ಜಿಲ್ಲಾ ಆಸ್ಪತ್ರೆಯ ವೈದ್ಯರು ಮೃತಪಟ್ಟಿರುವುದಾಗಿ ಘೋಷಿಸಿದರು. ಮೂರನೇ ವ್ಯಕ್ತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದರು.

ವಿಧಿವಿಜ್ಞಾನದ ತಂಡವು ಸಾಕ್ಷ್ಯಗಳನ್ನು ಸಂಗ್ರಹಿಸುತ್ತಿದ್ದು, ಮೃತ ವ್ಯಕ್ತಿಗಳ ಮರಣೋತ್ತರ ಪರೀಕ್ಷೆಯನ್ನು ವೈದ್ಯರ ತಂಡವು ನಡೆಸುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತಪಟ್ಟ ಗುಲಾಬ್ ಸಿಂಗ್ ಕೋಸಿ ಕಲನ್ ಪೊಲೀಸ್ ಠಾಣೆ ವ್ಯಾಪ್ತಿಯ ದಲೌತಾ ಗ್ರಾಮದವರಾಗಿದ್ದು, ಶ್ಯಾಮ್ ಸುಂದರ್ ಮತ್ತು ರಾಮ್ ಬಾಬು ಅವರು ಗೋವರ್ಧನ್ ಪೊಲೀಸ್ ಠಾಣೆ ವ್ಯಾಪ್ತಿಯ ಪೈಂತಾ ಗ್ರಾಮದ ನಿವಾಸಿಗಳು.

ಮೃತ ಗೋಪಾಲ್‌ ಅವರ ಸೋದರರು, ಆಶ್ರಮದೊಳಗೆ ಸಾಧುಗಳಿಗೆ ವಿಷ ನೀಡಲಾಗಿದೆ ಎಂದು ಆರೋಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.