ಮಾಯಾವತಿ
ಪಿಟಿಐ
ಲಖನೌ: ಉತ್ತರ ಪ್ರದೇಶದಲ್ಲಿ ತಮ್ಮ ಪಕ್ಷ ಪುನಃಶ್ವೇತನಗೊಳಿಸುವಲ್ಲಿ ಸವಾಲು ಎದುರಿಸುತ್ತಿರುವ ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ, ತಮ್ಮನ್ನು ತಾವು ‘ಉಕ್ಕಿನ ಮಹಿಳೆ’ ಎಂದು ಶನಿವಾರ ಬಣ್ಣಿಸಿಕೊಂಡಿದ್ದಾರೆ.
‘ಸಾಮಾಜಿಕ ಮತ್ತು ರಾಜಕೀಯ ಬದಲಾವಣೆಗೆ ಅಧಿಕಾರವೇ ಪ್ರಮುಖ ಕೀಲಿ ಕೈ ಆಗಿದೆ. ಇದನ್ನು ಪಡೆದುಕೊಳ್ಳಲು ಸಜ್ಜಾಗಬೇಕು‘ ಎಂದು ತಮ್ಮ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.
ಬಿಎಸ್‌ಪಿ ಸಂಸ್ಥಾಪಕ ಕಾನ್ಶಿರಾಮ್ ಅವರ 91ನೇ ಜನ್ಮ ದಿನಾಚರಣೆಯಂದು ಅವರಿಗೆ ಗೌರವ ಸಲ್ಲಿಸಿದ್ದ ಮಾಯಾವತಿ, ಸಾಮಾಜಿಕ ಬದಲಾವಣೆಗಾಗಿ ಕಾನ್ಶಿರಾಮ್ ಅವರು ಪ್ರಾರಂಭಿಸಿದ ಚಳವಳಿಯನ್ನು ಮತ್ತಷ್ಟು ಬಲಪಡಿಸುವಂತೆ ದಲಿತರು ಮತ್ತು ಸಮಾಜದ ಇತರ ದುರ್ಬಲ ವರ್ಗಗಳಿಗೆ ಕರೆ ನೀಡಿದರು.
‘ಬಹುಜನ ಸಮಾಜವು ತಮ್ಮ ಮತ ಶಕ್ತಿಯನ್ನು ಅರಿಯಬೇಕು. ಅಧಿಕಾರದ ಕೀಲಿ ಕೈ ಹಿಡಿಯಲು ಶ್ರಮಿಸಬೇಕು. ಈ ಬದಲಾವಣೆ ಅವರಿಗೆ ಅಗತ್ಯವಾಗಿದೆ. ಉಕ್ಕಿನ ಮಹಿಳೆಯ ನೇತೃತ್ವದಲ್ಲಿ ಬಿಎಸ್‌ಪಿ ಎಂತಹ ಆಡಳಿತ ನಡೆಸಿದೆ ಮತ್ತು ಹೇಗೆ ಭರವಸೆಗಳನ್ನು ಈಡೇರಿಸಿದೆ ಎನ್ನುವುದನ್ನು ರಾಜ್ಯದ ಜನತೆ ನೋಡಿದೆ. ನಮ್ಮ ಆಡಳಿತದಲ್ಲಿ ಸಮಾಜದ ದುರ್ಬಲ ವರ್ಗಗಳ ಸರ್ವಾಂಗೀಣ ಅಭಿವೃದ್ಧಿ ಮಾಡಿದ್ದೆವು. ಆದರೆ, ಇತರ ಪಕ್ಷಗಳು ಹುಸಿ ಭರವಸೆಗಳನ್ನು ನೀಡಿವೆ’ ಎಂದು ಅವರು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.