ADVERTISEMENT

ದೆಹಲಿ ಸರ್ಕಾರ ಹೇಳಿದ್ದಕ್ಕಿಂತ ಹೆಚ್ಚು ಕೋವಿಡ್ ಸಾವುಗಳು ಸಂಭವಿಸಿವೆ: ಮೇಯರ್

ಪಿಟಿಐ
Published 18 ಏಪ್ರಿಲ್ 2021, 2:51 IST
Last Updated 18 ಏಪ್ರಿಲ್ 2021, 2:51 IST
ದೆಹಲಿಯ ಸೀಮಾಪುರಿಯಲ್ಲಿ ಕೋವಿಡ್‌ನಿಂದ ಮೃತಪಟ್ಟವರ ಅಂತ್ಯಸಂಸ್ಕಾರ: ಪಿಟಿಐ ಚಿತ್ರ
ದೆಹಲಿಯ ಸೀಮಾಪುರಿಯಲ್ಲಿ ಕೋವಿಡ್‌ನಿಂದ ಮೃತಪಟ್ಟವರ ಅಂತ್ಯಸಂಸ್ಕಾರ: ಪಿಟಿಐ ಚಿತ್ರ   

ನವದೆಹಲಿ: ದೆಹಲಿಯಲ್ಲಿ ಕೋವಿಡ್ ಸೋಂಕಿನಿಂದ ಮೃತಪಟ್ಟವರ ಕುರಿತಂತೆ ದೆಹಲಿ ಸರ್ಕಾರ ನೀಡಿದ ಸಂಖ್ಯೆಗಿಂತ ಹೆಚ್ಚಿನ ಸಾವುಗಳು ಶುಕ್ರವಾರ ಸಂಭವಿಸಿವೆ ಎಂದು ಉತ್ತರ ದೆಹಲಿಯ ಮೇಯರ್ ಜೈ ಪ್ರಕಾಶ್ ಹೇಳಿದ್ದಾರೆ.

ಆರೋಗ್ಯ ಇಲಾಖೆ ಹಂಚಿಕೊಂಡ ಅಧಿಕೃತ ಮಾಹಿತಿಯ ಪ್ರಕಾರ, ಏಪ್ರಿಲ್ 16 ರಂದು ದೆಹಲಿಯಲ್ಲಿ 141 ಸಾವು ಸಂಭವಿಸಿವೆ ಎಂದು ತಿಳಿಸಲಾಗಿದೆ. ಆದರೆ, ಶುಕ್ರವಾರ ದೆಹಲಿಯಲ್ಲಿ ಸಂಭವಿಸಿದ ಕೋವಿಡ್ ಸೋಂಕಿತರ ಸಾವಿನ ಸಂಖ್ಯೆ 193 ಎಂದು ಉತ್ತರ ದೆಹಲಿಯ ಮೇಯರ್ ಹೇಳಿದ್ದಾರೆ.

‘ಕೋವಿಡ್‌ನಿಂದ ಮೃತಪಟ್ಟವರ ಅಂತ್ಯಕ್ರಿಯೆಯ ಲೆಕ್ಕದ ಪ್ರಕಾರ, 193 ಸಾವು ಸಂಭವಿಸಿವೆ’ ಎಂದು ಅವರು ಹೇಳಿದ್ದಾರೆ.

ADVERTISEMENT

ದೆಹಲಿ ನಗರದಾದ್ಯಂತ ಕೋವಿಡ್‌ನಿಂದ ಮೃತಪಟ್ಟವರ ಅಂತ್ಯಕ್ರಿಯೆಗೆ 300 ಸ್ಥಳಗಳನ್ನು ನಿಗದಿ ಮಾಡಲಾಗಿದೆ ಎಂದು ಅವರು ತಿಳಿಸಿದರು.

ಕಳೆದ ವರ್ಷವೂ, ಕೋವಿಡ್‌ ಸಾವುಗಳ ಸಂಖ್ಯೆ ಕುರಿತಂತೆ ಎಎಪಿ ನೇತೃತ್ವದ ದೆಹಲಿ ಸರ್ಕಾರ ಮತ್ತು ಬಿಜೆಪಿ ಆಡಳಿತವಿರುವ ಸ್ಥಳಿಯ ಸಂಸ್ಥೆಗಳ ನಡುವೆ ಭಿನ್ನಾಭಿಪ್ರಾಯದ ಮಾತುಗಳು ಕೇಳಿಬಂದಿದ್ದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.