ಮಹಾರಾಷ್ಟ್ರ: ಸ್ವಾತಂತ್ರ್ಯ ದಿನದಂದು ಮಾಂಸ ಮಾರಾಟವನ್ನು ನಿಷೇಧಿಸಿ ಆದೇಶ ಹೊರಡಿಸಿರುವ ಕಲ್ಯಾಣ್ ಡೊಂಬಿವಾಲಿ ಮುನ್ಸಿಪಲ್ ಕಾರ್ಪೊರೇಷನ್ (ಕೆಡಿಎಂಸಿ) ಆದೇಶಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಕೆಡಿಎಂಸಿ ಆದೇಶದ ಪ್ರಕಾರ, ಮೇಕೆ, ಕುರಿ, ಕೋಳಿ ಮತ್ತು ದೊಡ್ಡ ಪ್ರಾಣಿಗಳ ಪರವಾನಗಿ ಪಡೆದ ಕಸಾಯಿಖಾನೆಗಳು ಹಾಗೂ ಮಾಂಸ ಮಾರಾಟ ಮಳಿಗೆಗಳು ಮತ್ತು ಅಂಗಡಿಗಳು ಆಗಸ್ಟ್ 14 ರ ಮಧ್ಯರಾತ್ರಿಯಿಂದ ಆಗಸ್ಟ್ 15 ರ ಮಧ್ಯರಾತ್ರಿಯವರೆಗೆ ಯಾವುದೇ ಮಾಂಸ ಮಾರಾಟಕ್ಕೆ ಅವಕಾಶವಿಲ್ಲ. ಒಂದು ವೇಳೆ ಆ ದಿನ ಮಾಂಸ ಮಾರಾಟವಾದರೇ, ಕಾಯ್ದೆ 1949 ರ ಅಡಿಯಲ್ಲಿ ಕ್ರಮ ಕೈಗೊಳ್ಳುವುದಾಗಿ ಕಲ್ಯಾಣ್ ಡೊಂಬಿವಾಲಿ ಮುನ್ಸಿಪಲ್ ಕಾರ್ಪೊರೇಷನ್ ಸಂಸ್ಥೆ ಹೇಳಿದೆ.
ಕೆಡಿಎಂಸಿ ಆದೇಶಕ್ಕೆ ಪ್ರತಿಕ್ರಿಯಿಸಿರುವ ವಿರೋಧ ಪಕ್ಷಗಳಾದ ಎನ್‌ಸಿಪಿ (ಎಸ್‌ಪಿ) ಮತ್ತು ಶಿವಸೇನೆ (ಯುಬಿಟಿ) ನಾಯಕರು, ನಮಗೆ ಯಾವ ಆಹಾರ ಬೇಕೊ ಅದನ್ನು ಸೇವಿಸುತ್ತೆವೆ. ಸ್ವಾತಂತ್ರ್ಯ ದಿನದ ಪ್ರಯುಕ್ತ ಆ ದಿನ ನಾನು ಮಟನ್ ಪಾರ್ಟಿ ಮಾಡುತ್ತೇನೆ. ನಮ್ಮ ಸ್ವಾತಂತ್ರ್ಯವನ್ನು ಕಸಿದುಕೊಳ್ಳುಲು ನೀವು ಯಾರು ಎಂದು– ಪ್ರಶ್ನಿಸಿ ಠಾಣೆ ಜಿಲ್ಲೆಯ ಕಲ್ವಾ-ಮುಂಬೈ ವಿಧಾನಸಭಾ ಕ್ಷೇತ್ರದ ಅವ್ಹಾದ್ ಆದೇಶವನ್ನು ವಿರೋಧಿಸಿದ್ದಾರೆ.
ಜನರ ಆಹಾರ ಆಯ್ಕೆಗಳನ್ನು ನಿರ್ದೇಶಿಸಿದ್ದಕ್ಕಾಗಿ ಕೆಡಿಎಂಸಿ ಆಯುಕ್ತರನ್ನು ಅಮಾನತುಗೊಳಿಸಬೇಕೆಂದು ಶಿವಸೇನೆ (ಯುಬಿಟಿ) ಶಾಸಕ ಆದಿತ್ಯ ಠಾಕ್ರೆ ಒತ್ತಾಯಿಸಿದರು.
ಕೆಡಿಎಂಸಿಯ ಕ್ರಮವನ್ನು ಸಮರ್ಥಿಸಿಕೊಂಡ ಶಿವಸೇನಾ ನಾಯಕ ವಿಶ್ವನಾಥ್ ಭೋಯಿರ್, ಜನರ ಆಹಾರ ಕ್ರಮವನ್ನು ವಿರೋಧಿಸುತ್ತಿಲ್ಲ. ಒಂದು ದಿನ ಮಾಂಸ ತಿನ್ನದಿದ್ದರೆ ಏನು ಸಮಸ್ಯೆ? ವಿರೋಧ ಪಕ್ಷಗಳಿಗೆ ಟೀಕಿಸುವುದು ಮಾತ್ರ ತಿಳಿದಿದೆ" ಎಂದು ಅವರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.