ADVERTISEMENT

ಮೇಧಾ ನರ್ವೇಕರ್‌ ನೇಮಕ

ಪಿಟಿಐ
Published 3 ಮಾರ್ಚ್ 2019, 19:04 IST
Last Updated 3 ಮಾರ್ಚ್ 2019, 19:04 IST
ಮೇಧಾ ನರ್ವೇಕರ್‌
ಮೇಧಾ ನರ್ವೇಕರ್‌   

ಹೂಸ್ಟನ್‌ : ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದ ಉಪಾಧ್ಯಕ್ಷೆ ಹಾಗೂ ಕಾರ್ಯದರ್ಶಿ ಸ್ಥಾನಕ್ಕೆ ಭಾರತ ಮೂಲದ ಮೇಧಾ ನರ್ವೇಕರ್‌ ಅವರನ್ನು ನೇಮಕಗೊಳಿಸಲಾಗಿದೆ.

ವಾರ್ಟನ್‌ ಸ್ಕೂಲ್‌ನಿಂದ ಎಂಬಿಎ ಪದವಿ ಪಡೆದಿರುವ ನರ್ವೇಕರ್‌ ಅವರು ಇದೇ ಜುಲೈ1ರಿಂದ ಹೊಸ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದ್ದಾರೆ ಎಂದು ವಿವಿಯ ಪ್ರಕಟಣೆ ತಿಳಿಸಿದೆ.

ಪೆನ್ಸಿಲ್ವೇನಿಯಾ ವಿ.ವಿಯ ಅಭಿವೃದ್ಧಿ ಹಾಗೂ ಹಳೆ ವಿದ್ಯಾರ್ಥಿಗಳ ಸಂಪರ್ಕ ಕಚೇರಿಯಲ್ಲಿ (ಡಿಎಆರ್‌) ನರ್ವೇಕರ್‌ ಅವರು ಕಳೆದ 32 ವರ್ಷಗಳಿಂದ ಕೆಲಸ ಮಾಡುತ್ತಿದ್ದರು. ಇದೀಗ ಉಪಾಧ್ಯಕ್ಷೆಯಾಗಿ ನೇಮಕಗೊಂಡಿದ್ದು, ಉಳಿದ ವಿ.ವಿಯ ಅಧ್ಯಕ್ಷರು ಹಾಗೂ ಟ್ರಸ್ಟಿಗಳ ಜೊತೆ ಕೆಲಸ ಮಾಡಲಿದ್ದಾರೆ.

ADVERTISEMENT

‘ ಮೇಧಾ ಅವರುವಿಶ್ವವಿದ್ಯಾಲಯದ ಒಳಗೆ ಸಾಕಷ್ಟು ಗೌರವ ಹೊಂದಿದ ವ್ಯಕ್ತಿಯಾಗಿದ್ದು, ಟ್ರಸ್ಟಿಗಳ ಜತೆಗೆ ನೇರ ಸಂಪರ್ಕ, ಅನಿವಾಸಿಗಳು ಹಾಗೂ ದೇಣಿಗೆದಾರರ ಜೊತೆಗೆ ನಿಕಟ ಬಾಂಧವ್ಯ ಹೊಂದಿದ್ದಾರೆ’ ಎಂದು ವಿಶ್ವವಿದ್ಯಾಲಯದ ಅಧ್ಯಕ್ಷ ಅಮಿ ಗುಟ್ಮನ್‌ ತಿಳಿಸಿದರು.

ವಿ.ವಿಯ ಉಪಾಧ್ಯಕ್ಷೆಯಾಗಿರುವ ನರ್ವೇಕರ್‌ ಅವರು ಜೂನ್‌ ತಿಂಗಳ ಅಂತ್ಯಕ್ಕೆ ನಿವೃತ್ತಿಯಾಗಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.