ADVERTISEMENT

ವೈದ್ಯಕೀಯ ಉದ್ದೇಶ: ಪ್ರತ್ಯೇಕ ಪರಮಾಣು ರಿಯಾಕ್ಟರ್‌ ಸ್ಥಾಪನೆ

ಪಿಟಿಐ
Published 12 ಅಕ್ಟೋಬರ್ 2025, 13:43 IST
Last Updated 12 ಅಕ್ಟೋಬರ್ 2025, 13:43 IST
   

ಮುಂಬೈ (): ಭಾರತದಲ್ಲಿ ಇದೇ ಪ್ರಥಮ ಬಾರಿಗೆ ವೈದ್ಯಕೀಯ ಬಳಕೆಗಾಗಿ ವಿಕಿರಣಶೀಲ ರಾಸಾಯನಿಕಗಳನ್ನು (ಐಸೊಟೋಪ್‌) ಉತ್ಪಾದಿಸಲು ಅನುಕೂಲವಾಗುವಂತೆ ಪ್ರತ್ಯೇಕ ಪರಮಾಣು ರಿಯಾಕ್ಟರ್‌ವೊಂದನ್ನು ವಿಶಾಖಪಟ್ಟಣದಲ್ಲಿ ಸ್ಥಾಪಿಸಲು ಅಣುಶಕ್ತಿ ಇಲಾಖೆ ಮುಂದಾಗಿದೆ.

‘ಈ ರಿಯಾಕ್ಟರ್‌ ಸ್ಥಾಪನೆಯಾದರೆ ಕಡಿಮೆ ವೆಚ್ಚದಲ್ಲಿ ಕ್ಯಾನ್ಸರ್‌ ಚಿಕಿತ್ಸೆ ದೊರಕಲಿದೆ. ಮುಂದಿನ 4–5 ವರ್ಷದಲ್ಲಿ ಇದು ಸಿದ್ಧಗೊಳ್ಳಲಿದೆ. ದೇಶೀಯ ಬೇಡಿಕೆಗೆ ಅಷ್ಟೇ ಅಲ್ಲದೇ, ರಫ್ತು ಮಾಡುವ ಉದ್ದೇಶದಿಂದಲೂ ಇದನ್ನು ಸ್ಥಾಪಿಸಲಾಗುತ್ತಿದೆ. ಇದಕ್ಕಾಗಿ ಅನುಮತಿ ದೊರಕಿದ್ದು, ಅನುದಾನಕ್ಕೆ ಕಾಯುತ್ತಿದ್ದೇವೆ’ ಎಂದು ಬಾಬಾ ಅಣುಶಕ್ತಿ ಸಂಶೋಧನಾ ಕೇಂದ್ರದ (ಬಿಎಆರ್‌ಸಿ) ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

‘ಸರ್ಕಾರಿ–ಖಾಸಗಿ ಸಹಭಾಗಿತ್ವದಲ್ಲಿ ರಿಯಾಕ್ಟರ್‌ ಸ್ಥಾಪನೆಯಾಗಲಿದೆ. ಐಸೋಟೋಪ್‌ಗಳನ್ನು ಮಾರಾಟ ಮಾಡಲು ಖಾಸಗಿಯವರಿಗೆ ಅವಕಾಶ ನೀಡಲಾಗಿದೆ. ಈ ರಿಯಾಕ್ಟರ್‌ನ ವಿನ್ಯಾಸ ಮತ್ತು ನಿರ್ವಹಣೆಯನ್ನು ಭಾರತೀಯ ಅಣು ವಿದ್ಯುತ್ ಕಾರ್ಪೊರೇಷನ್ ಲಿಮಿಟೆಡ್‌ (ಎನ್‌ಪಿಸಿಐಎಲ್) ಮತ್ತು ಬಿಎಆರ್‌ಸಿ ವಹಿಸಿಕೊಳ್ಳಲಿವೆ’ ಎಂದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.