ADVERTISEMENT

ಮೀರತ್‌: ಕಾಲೇಜು ಕಟ್ಟಡದಿಂದ ಹಾರಿದ್ದ 22 ವರ್ಷದ ವಿದ್ಯಾರ್ಥಿನಿ ಸಾವು

ಪಿಟಿಐ
Published 22 ಅಕ್ಟೋಬರ್ 2022, 14:07 IST
Last Updated 22 ಅಕ್ಟೋಬರ್ 2022, 14:07 IST
ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೆಯಾಗಿರುವ ವಿಡಿಯೊ ಸ್ಕ್ರೀನ್‌ಶಾಟ್‌
ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೆಯಾಗಿರುವ ವಿಡಿಯೊ ಸ್ಕ್ರೀನ್‌ಶಾಟ್‌   

ಮೀರತ್‌: ಎರಡು ದಿನಗಳ ಹಿಂದೆ ಕಾಲೇಜು ಕಟ್ಟಡದಿಂದ ಕೆಳಗೆ ಹಾರಿ ಗಂಭೀರ ಗಾಯಗೊಂಡಿದ್ದ ವಿದ್ಯಾರ್ಥಿನಿ ಮೃತಪಟ್ಟಿದ್ದಾರೆ.

ಮೀರತ್‌ನ ಸುಭಾರ್ತಿ ವೈದ್ಯಕೀಯ ಕಾಲೇಜಿನ ದಂತ ವೈದ್ಯಕೀಯ ವಿಭಾಗದ ದ್ವಿತೀಯ ವರ್ಷದ ವಿದ್ಯಾರ್ಥಿನಿ 4ನೇ ಮಹಡಿಯಿಂದ ಕೆಳಗೆ ಹಾರಿದ್ದರು.

ವಿದ್ಯಾರ್ಥಿನಿಯ ತಂದೆ ನೀಡಿದ ದೂರಿನನ್ವಯ ಅದೇ ವಿಭಾಗದ ವಿದ್ಯಾರ್ಥಿ ಸಿದ್ಧಾಂತ್‌ ಕುಮಾರ್‌ ಪನ್ವಾರ್‌ನನ್ನು ಬಂಧಿಸಲಾಗಿದೆ ಮತ್ತು ಜೈಲಿನಲ್ಲಿ ಕೂಡಿಡಲಾಗಿದೆ ಎಂದು ಸ್ಥಳೀಯ ಪೊಲೀಸ್‌ ಠಾಣೆಯ ಅಧಿಕಾರಿ ರಾಜೇಶ್‌ ಕುಮಾರ್‌ ಕಾಂಬೋಜ್‌ ಹೇಳಿದ್ದಾರೆ.

ADVERTISEMENT

22 ವರ್ಷದ ವಿದ್ಯಾರ್ಥಿನಿ ವನಿಯಾ ಅಸದ್‌ ಕಾಲೇಜಿನ ಲೈಬ್ರರಿ ಕಟ್ಟಡದಿಂದ ಹಾರಿದ್ದರು. ಆರೋಪಿ ಸಿದ್ಧಾಂತ್‌, ಅಸದ್‌ ಅವರಿಗೆ ಎಲ್ಲರ ಎದುರಲ್ಲಿ ಕಪಾಳಕ್ಕೆ ಹೊಡಿದ್ದರು. ಇದರಿಂದ ಅಸದ್‌ ಮನನೊಂದಿದ್ದರು ಎಂಬುದು ತನಿಖೆಯ ವೇಳೆ ತಿಳಿದು ಬಂದಿರುವುದಾಗಿ ರಾಜೇಶ್‌ ಕುಮಾರ್‌ ಹೇಳಿದ್ದಾರೆ.

ವಿದ್ಯಾರ್ಥಿನಿ ಕಾಲೇಜಿನ ಲೈಬ್ರರಿ ಕಟ್ಟಡದಿಂದ ಕೆಳಗೆ ಹಾರುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೆಯಾಗಿದೆ. ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವುದಾಗಿಯೂ ಆರೋಪಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.