ADVERTISEMENT

ಮೇಘಾಲಯ: ಸಚಿವ, ನಾಲ್ವರು ಶಾಸಕರು ರಾಜೀನಾಮೆ

ಪಿಟಿಐ
Published 18 ಜನವರಿ 2023, 16:53 IST
Last Updated 18 ಜನವರಿ 2023, 16:53 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಶಿಲ್ಲಾಂಗ್‌: ಚುನಾವಣಾ ಆಯೋಗವು ಮೇಘಾಲಯ ವಿಧಾನಸಭೆಗೆ ಚುನಾವಣೆ ಘೋಷಿಸುವುದಕ್ಕೂ ಕೆಲ ಗಂಟೆಗಳ ಮುನ್ನ ಮೇಘಾಲಯದ ಆರೋಗ್ಯ ಸಚಿವ ರೆನಿಕ್ಟನ್ ಟೋಂಗ್‌ಖಾರ್ ಮತ್ತು ಇತರ ನಾಲ್ವರು ಶಾಸಕರು ತಮ್ಮ ಶಾಸಕ ಸ್ಥಾನಕ್ಕೆ ಬುಧವಾರ ರಾಜೀನಾಮೆ ಸಲ್ಲಿಸಿದ್ದಾರೆ.

ತೃಣಮೂಲ ಕಾಂಗ್ರೆಸ್‌ನ ಶಿತ್ಲಾಂಗ್‌ ಪಾಲೆ, ಕಾಂಗ್ರೆಸ್‌ನಿಂದ ಅಮಾನತುಗೊಂಡಿರುವ ಮೈರಾಲ್‌ಬೋರ್ನ್‌ ಸೈಯೆಮ್‌ ಮತ್ತು ಪಿ.ಟಿ.ಸಾಕ್ಮಿ ಹಾಗೂ ಪಕ್ಷೇತರ ಶಾಸಕ ಲ್ಯಾಂಬರ್‌ ಮಲಂಗಿಯಾಂಗ್‌ ರಾಜೀನಾಮೆ ನೀಡಿದ ಶಾಸಕರಾಗಿದ್ದಾರೆ ಎಂದು ವಿಧಾನಸಭೆಯ ಅಧಿಕಾರಿಗಳು ತಿಳಿಸಿದ್ದಾರೆ.

ಈ ಐವರು ಯುನೈಟೆಡ್ ಡೆಮಾಕ್ರಟಿಕ್ ಪಾರ್ಟಿ (ಯುಡಿಪಿ) ಸೇರಲು ಮುಂದಾಗಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ADVERTISEMENT

ಕಾನ್ರಾಡ್‌ ಸಂಗ್ಮಾ ಅವರ ನೇತೃತ್ವದ ಸಮ್ಮಿಶ್ರ ಸರ್ಕಾರದಲ್ಲಿ ಯುಡಿಪಿ ಪ್ರಮುಖ ಪಾಲುದಾರ ಪಕ್ಷವಾಗಿದೆ. ಆರು ಪಕ್ಷಗಳನ್ನು ಒಳಗೊಂಡ ಮೇಘಾಲಯ ಡೆಮಾಕ್ರಟಿಕ್‌ ಅಲೈಯನ್ಸ್‌ (ಎಂಡಿಎ) ಅನ್ನು ಸಂಗ್ಮಾ ಮುನ್ನಡೆಸುತ್ತಿದ್ದು, ಈ ಮೈತ್ರಿಕೂಟದ ಭಾಗಿಯಾಗಿರುವ ಬಿಜೆಪಿ ಇಬ್ಬರು ಶಾಸಕರನ್ನು ಹೊಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.