ADVERTISEMENT

ಇನ್ನರ್ ಲೈನ್ ಪರ್ಮಿಟ್: ಪ್ರಧಾನಿ ಮಧ್ಯೆಪ್ರವೇಶಕ್ಕೆ ಮೇಘಾಲಯ ಸಿ.ಎಂ ಮನವಿ

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2023, 14:04 IST
Last Updated 9 ಆಗಸ್ಟ್ 2023, 14:04 IST
ಕಾನ್ರಾಡ್ ಕೆ. ಸಂಗ್ಮಾ
ಕಾನ್ರಾಡ್ ಕೆ. ಸಂಗ್ಮಾ   

ಗುವಾಹಟಿ: ಮೇಘಾಲಯದಲ್ಲಿ ಇನ್ನರ್ ಲೈನ್ ಪರ್ಮಿಟ್ (ಐಎಲ್‌ಪಿ) ಅನುಷ್ಠಾನಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಅವರು ಮಧ್ಯ ಪ್ರವೇಶಿಸಬೇಕು ಮತ್ತು ಕೇಂದ್ರ ಗೃಹ ಸಚಿವಾಲಯ ಈ ಕುರಿತು ಪ್ರತಿಕ್ರಿಯೆ ನೀಡಬೇಕು ಎಂದು  ಮುಖ್ಯಮಂತ್ರಿ ಕಾನ್ರಾಡ್ ಕೆ. ಸಂಗ್ಮಾ ಮಂಗಳವಾರ ಮನವಿ ಮಾಡಿದ್ದಾರೆ.

ನವದೆಹಲಿಯಲ್ಲಿ ಪ್ರಧಾನಿ ಮೋದಿ ಅವರನ್ನು ಭೇಟಿಯಾದ ಸಂಗ್ಮಾ, ಮೇಘಾಲಯದಲ್ಲಿ ಐಎಲ್‌ಪಿ ಜಾರಿ ಕುರಿತಂತೆ 2019ರ ಡಿಸೆಂಬರ್‌ನಲ್ಲಿ ರಾಜ್ಯ ವಿಧಾನಸಭೆಯು ಕೈಗೊಂಡ ನಿರ್ಣಯದ ಪತ್ರವನ್ನು ಸಲ್ಲಿಸಿದರು. ಗಡಿಯಲ್ಲಿ ಅಸ್ಸಾಂ ಮತ್ತು ಮೇಘಾಲಯದ ಮಧ್ಯೆ ಇರುವ ಸಂಘರ್ಷ ಪರಿಹಾರಕ್ಕೆ ಮಧ್ಯಪ್ರವೇಶಿಸಬೇಕು ಎಂದೂ ಮನವಿ ಮಾಡಿದರು.

ಐಎಲ್‌ಪಿ ಎಂದರೇನು?:

ಐಎಲ್‌ಪಿ ಜಾರಿಯಲ್ಲಿರುವ ರಾಜ್ಯಗಳಿಗೆ ಭೇಟಿ ನೀಡಲು, ದೇಶದ ಬೇರೆ ರಾಜ್ಯಗಳ ಜನರು ಸರ್ಕಾರದಿಂದ ಏಳು ದಿನಗಳ ಪರ್ಮಿಟ್ ಪಡೆಯಬೇಕಾಗುತ್ತದೆ. ಈ ರಾಜ್ಯಗಳನ್ನು ಸಂರಕ್ಷಿತ ಪ್ರದೇಶಗಳು ಎಂದು ಗುರುತಿಸಲಾಗಿದೆ. ಹೀಗಾಗಿ ಹೊರಗಿನ ವ್ಯಕ್ತಿಗಳು ಇಲ್ಲಿಗೆ ಮುಕ್ತವಾಗಿ ಪ್ರವೇಶಿಸುವುದನ್ನು ನಿರ್ಬಂಧಿಸಲಾಗಿದೆ. ಮಣಿಪುರ, ನಾಗಾಲ್ಯಾಂಡ್‌, ಮಿಜೋರಾಂ ಮತ್ತು ಅರುಣಾಚಲ ಪ್ರದೇಶದಲ್ಲಿ ಈಗಾಗಲೇ ಈ ನಿಯಮ ಜಾರಿಯಲ್ಲಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.