ADVERTISEMENT

ಮೆಲೇನಿಯಾ ಉಡುಗೆಯಲ್ಲಿ ಭಾರತೀಯತೆ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2020, 4:49 IST
Last Updated 25 ಫೆಬ್ರುವರಿ 2020, 4:49 IST
ಆಗ್ರಾದ ತಾಜ್‌ ಮಹಲ್‌ ಎದುರು ಟ್ರಂಪ್‌ ದಂಪತಿ.
ಆಗ್ರಾದ ತಾಜ್‌ ಮಹಲ್‌ ಎದುರು ಟ್ರಂಪ್‌ ದಂಪತಿ.    

ಅಹಮದಾಬಾದ್‌ನಲ್ಲಿ ಸೋಮವಾರ ಬಂದಿಳಿದ ಅಮೆರಿಕದ ಪ್ರಥಮ ಮಹಿಳೆ ಮೆಲೇನಿಯಾ ಟ್ರಂಪ್, ಶ್ವೇತವರ್ಣದ ಜಂಪ್‌ಸೂಟ್‌ ಜತೆಗೆ ಹಸಿರು ಹಾಗೂ ಬಂಗಾರದ ಬಣ್ಣದ ಕುಸುರಿ ಉಳ್ಳ ರೇಷ್ಮೆಯ ‘ಸ್ಯಾಶ್’ ಧರಿಸಿ ಗಮನ ಸೆಳೆದರು.

ವಸ್ತ್ರವಿನ್ಯಾಸಕಾರ ಹರ್ವೆ ಪಿಯರ್ ಅವರು ಈ ಜಂಪ್‌ಸೂಟ್‌ ವಿನ್ಯಾಸಗೊಳಿಸಿದ್ದರು. ಮೆಲೇನಿಯಾ ಅವರು ಸೊಂಟದ ಪಟ್ಟಿಯ ರೀತಿ ಧರಿಸಿದ್ದ ವಸ್ತ್ರವು ಭಾರತ ಮೂಲದ್ದಾಗಿದ್ದು, ಈ ಮೂಲಕ ಅವರ ದಿರಿಸಿನಲ್ಲಿ ಭಾರತೀಯತೆ ಸೇರಿಕೊಂಡಿತ್ತು.

‘ಮೆಲೇನಿಯಾ ಧರಿಸಿರುವ ಸ್ಯಾಶ್ (ದಿರಿಸಿನ ಮೇಲೆ ಸೊಂಟದ ಸುತ್ತಲೂ ಕಟ್ಟಿಕೊಳ್ಳುವ ಬಣ್ಣಬಣ್ಣದ ವಸ್ತ್ರ), ಭಾರತದಲ್ಲಿ 20ನೇ ಶತಮಾನದಲ್ಲಿ ತಯಾರಾದ ವಸ್ತ್ರವೊಂದರ ಅಂಚಿನಿಂದ ಸಿದ್ಧಪಡಿಸಿದ್ದು. ಉತ್ತಮ ಸಂಗ್ರಹಕಾರರಾಗಿರುವ ನನ್ನ ಸ್ನೇಹಿತರಿಂದ ಪ್ಯಾರಿಸ್‌ನಲ್ಲಿ ಈ ವಸ್ತ್ರ ದೊರಕಿತು. ಈ ಅಂಚು ಆಕರ್ಷಕವಾಗಿ ಕಾಣಿಸಿದ್ದರಿಂದ ಇದನ್ನು ನಾವು ಬಳಸಿಕೊಂಡೆವು’ ಎಂದು ಹರ್ವೆ ಅವರು ತಮ್ಮ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.