ADVERTISEMENT

ಯಾತ್ರಾರ್ಥಿಗಳ ಬಸ್‌ ಮೇಲೆ ಉಗ್ರರ ದಾಳಿ ಪ್ರಕರಣ ಎನ್‌ಐಎ ತನಿಖೆಗೆ

ಪಿಟಿಐ
Published 17 ಜೂನ್ 2024, 14:05 IST
Last Updated 17 ಜೂನ್ 2024, 14:05 IST
<div class="paragraphs"><p>ಎನ್‌ಐಎ (ಸಂಗ್ರಹ ಚಿತ್ರ)</p></div>

ಎನ್‌ಐಎ (ಸಂಗ್ರಹ ಚಿತ್ರ)

   

ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ರಿಯಾಸಿಯಲ್ಲಿ ಈಚೆಗೆ ಪ್ರಯಾಣಿಕರ ಬಸ್‌ನ ಮೇಲೆ ನಡೆದಿದ್ದ ಭಯೋತ್ಪಾದಕರ ದಾಳಿ ಕೃತ್ಯದ ತನಿಖೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆಗೆ (ಎನ್‌ಐಎ) ಒಪ್ಪಿಸಿ ಕೇಂದ್ರ ಗೃಹ ಸಚಿವಾಲಯವು ಆದೇಶಿಸಿದೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ ಈಚೆಗೆ ನಡೆಸಿದ್ದ ಸಭೆಯಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಕಾನೂನು ಸುವ್ಯವಸ್ಥೆ ಸ್ಥಿತಿ, ಅಮರನಾಥ ಯಾತ್ರೆಗೆ ನಡೆದಿರುವ ಸಿದ್ಧತೆಗಳನ್ನು ಕುರಿತು ಪರಿಶೀಲಿಸಿದ್ದರು. ಸಭೆಯ ಹಿಂದೆಯೇ ಈ ಅದೇಶ ಹೊರಬಿದ್ದಿದೆ.

ಉಗ್ರರ ದಾಳಿ ಕೃತ್ಯದಲ್ಲಿ ಮೂವರು ಮಹಿಳೆಯರು ಸೇರಿ ಒಂಬತ್ತು ಮಂದಿ ಸತ್ತಿದ್ದರು. ಬಸ್‌ನಲ್ಲಿ ಉತ್ತರಪ್ರದೇಶ, ರಾಜಸ್ಥಾನ, ದೆಹಲಿಯ ಸುಮಾರು 41 ಪ್ರಯಾಣಿಕರಿದ್ದರು. ಉಗ್ರರ ದಾಳಿ ಹಿಂದೆಯೇ ಚಾಲಕನ ನಿಯಂತ್ರಣ ತಪ್ಪಿದ್ದ ಬಸ್‌ ಕಂದಕ್ಕೆ ಉರುಳಿತ್ತು.

ಜೂನ್‌ 9ರಂದು ಉಗ್ರರ ದಾಳಿ ನಡೆದಿದ್ದು, ಪ್ರಯಾಣಿಕರು ಶಿವ್‌ಖೋರಿ ದೇವಸ್ಥಾನ ಭೇಟಿಯ ಬಳಿಕ ಕಾತ್ರಾದ ಮಾತಾ ವೈಷ್ಣೋದೇವಿ ದೇವಸ್ಥಾನಕ್ಕೆ ತೆರಳುವಾಗ ಕೃತ್ಯ ನಡೆದಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.