ADVERTISEMENT

ಹರಿಯಾಣದಲ್ಲಿ 3.8 ತೀವ್ರತೆಯ ಭೂಕಂಪ; ದೆಹಲಿಯಲ್ಲೂ ಕಂಪನ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 1 ಜನವರಿ 2023, 1:29 IST
Last Updated 1 ಜನವರಿ 2023, 1:29 IST
ಚಿತ್ರ ಕೃಪೆ: Twitter/@NCS_Earthquake
ಚಿತ್ರ ಕೃಪೆ: Twitter/@NCS_Earthquake   

ನವದೆಹಲಿ: ಹರಿಯಾಣ ಮತ್ತು ಹತ್ತಿರದ ಪ್ರದೇಶದಲ್ಲಿ ಶನಿವಾರ ತಡರಾತ್ರಿ ಕಡಿಮೆ ತೀವ್ರತೆಯ ಭೂಕಂಪ ಸಂಭವಿಸಿದೆ. ದೆಹಲಿಯಲ್ಲೂ ಕಂಪನದ ಅನುಭವವಾಗಿದೆ ಎಂದು ರಾಷ್ಟ್ರೀಯ ಭೂಕಂಪ ವಿಜ್ಞಾನ ಕೇಂದ್ರ (ಎನ್‌ಸಿಎಸ್) ತಿಳಿಸಿದೆ.

ಹೊಸ ವರ್ಷವನ್ನು ಸ್ವಾಗತಿಸುವ ರಾತ್ರಿಯಲ್ಲಿ ಕಂಪನದ ಅನುಭವವಾಗಿದೆ. ಹರಿಯಾಣದಲ್ಲಿ ರಿಕ್ಟರ್ ಮಾಪಕದಲ್ಲಿ 3.8 ತೀವ್ರತೆಯ ಭೂಕಂಪ ಸಂಭವಿಸಿದೆ.

ಹರಿಯಾಣದಿಂದ 12 ಕಿ.ಮೀ. ದೂರದ ಝಜ್ಜರ್‌ನಲ್ಲಿ ರಾತ್ರಿ 1.19ಕ್ಕೆ 5 ಕಿ.ಮೀ. ಆಳದಲ್ಲಿ ಕಂಪನದ ಕೇಂದ್ರ ಬಿಂದು ಪತ್ತೆಯಾಗಿದೆ ಎನ್‌ಸಿಎಸ್ ಟ್ವೀಟ್ ತಿಳಿಸಿದೆ.

ADVERTISEMENT

ಇತ್ತೀಚೆಗಷ್ಟೇ ನೇಪಾಳದಲ್ಲಿ ಭೂಕಂಪ ಸಂಭವಿಸಿದ್ದು, ಉತ್ತರ ಭಾರತದಲ್ಲೂ ಕಂಪನದ ಅನುಭವವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.