ADVERTISEMENT

ಪುಲ್ವಾಮ: ಎಲ್‌ಇಟಿಯ ಇಬ್ಬರು ಉಗ್ರರ ಹತ್ಯೆ

ಪಿಟಿಐ
Published 6 ನವೆಂಬರ್ 2020, 17:23 IST
Last Updated 6 ನವೆಂಬರ್ 2020, 17:23 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ನಡೆಸಿದ ಎನ್‌ಕೌಂಟರ್‌ನಲ್ಲಿ, ಪಾಕಿಸ್ತಾನ ಮೂಲದವರು ಎನ್ನಲಾದ ಲಷ್ಕರ್‌–ಇ–ತಯಬಾದ(ಎಲ್‌ಇಟಿ)ಇಬ್ಬರು ಉಗ್ರರು ಹತರಾಗಿದ್ದು, ಮತ್ತೊಬ್ಬ ಉಗ್ರ ಶರಣಾಗತಿಯಾಗಿದ್ದಾನೆ ಎಂದು ಪೊಲೀಸರು ಶುಕ್ರವಾರ ತಿಳಿಸಿದರು.

ದಕ್ಷಿಣ ಕಾಶ್ಮೀರ ಜಿಲ್ಲೆಯ ಲಾಲ್‌ಪೊರ ಚಟ್ಲಾಂ ಪ್ರದೇಶದಪಂಪೊರ್‌
ನಲ್ಲಿ ಉಗ್ರರು ಅಡಗಿದ್ದಾರೆ ಎನ್ನುವ ಖಚಿತ ಮಾಹಿತಿಯ ಮೇಲೆ ಗುರುವಾರ ಸಂಜೆ ಭದ್ರತಾಪಡೆ ಸಿಬ್ಬಂದಿ ಕಾರ್ಯಾಚರಣೆಗೆ ಇಳಿದಿದ್ದರು. ಉಗ್ರರು ಅಡಗಿರುವ ತಾಣವನ್ನು ಸುತ್ತವರಿದ ಸಂದರ್ಭದಲ್ಲಿ ಗುಂಡಿನ ಚಕಮಕಿ ನಡೆದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT