ADVERTISEMENT

ನಾಗರಿಕರನ್ನು ಅಪಹರಿಸಿದ ಉಗ್ರರು

ಪಿಟಿಐ
Published 17 ನವೆಂಬರ್ 2018, 15:14 IST
Last Updated 17 ನವೆಂಬರ್ 2018, 15:14 IST

ಶ್ರೀನಗರ:ದಕ್ಷಿಣ ಕಾಶ್ಮೀರದ ಸೋಫಿಯಾನ್‌ ಜಿಲ್ಲೆಯ ಮೂವರು ನಾಗರಿಕರನ್ನು ಉಗ್ರರು ಅಪಹರಿಸಿದ್ದಾರೆ.

ಬೇಕರಿಯಲ್ಲಿ ಕೆಲಸ ಮಾಡುತ್ತಿದ್ದಶಾಹೀದ್‌ ಅಹ್ಮದ್‌ ಗಾನೇ, ಫಾರೂಕ್ ಅಹ್ಮದ್‌ ಮತ್ತು ಹುಜೈಫ್‌ ಅಹ್ಮದ್‌ ಕುಟೈ ಅಪಹರಣಕ್ಕೊಳಗಾದವರು. ಕಾರಿನಲ್ಲಿ ಬಂದ ಉಗ್ರರು ಬಂದೂಕು ತೋರಿಸಿ ಇವರನ್ನು ಅಪಹರಿಸಿದ್ದಾರೆ.

ಇತ್ತೀಚೆಗಷ್ಟೇ ಇದೇ ಜಿಲ್ಲೆಯ ನಾದೀಮ್‌ ಮಂಜೂರ್‌ ಎಂಬಾತನನ್ನು ಉಗ್ರರು ಅಪಹರಿಸಿ ಕೊಲೆ ಮಾಡಿದ್ದರು. ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.