ADVERTISEMENT

ಈಶಾನ್ಯದ ಕಟ್ಟಕಡೆಯ ಕಿಲ್ಲೆ 'ಗೆದ್ದೀತೇ' ಬಿಜೆಪಿ?

ಉಮಾಪತಿ
Published 21 ನವೆಂಬರ್ 2018, 20:00 IST
Last Updated 21 ನವೆಂಬರ್ 2018, 20:00 IST
   

ನವದೆಹಲಿ:ಈಶಾನ್ಯ ಭಾರತದ ಸಪ್ತ ಸೋದರಿಯರು ಎಂದು ಕರೆಯಲಾಗುವ ರಾಜ್ಯಗಳಲ್ಲಿ ಒಂದಾದ ಮಿಜೋರಾಂ ಸ್ವತಂತ್ರ ರಾಜ್ಯ ಆದದ್ದು1987ರಲ್ಲಿ.ಮಿಜೋರಾಂ ಎಂದರೆ ಸ್ಥಳೀಯ ಭಾಷೆಯಲ್ಲಿ ಗುಡ್ಡಗಾಡು ಜನರ ನಾಡು ಎಂದು ಅರ್ಥ.

ಕ್ರೈಸ್ತಧರ್ಮವೇಹಾಸುಹೊಕ್ಕಾಗಿದ್ದು,ಇಗರ್ಜಿಗಳುರಾಜಕಾರಣದನಡೆಗಳಮೇಲೆಸಾಕಷ್ಟುಪ್ರಭಾವಹೊಂದಿರುವರಾಜ್ಯಇದು.ಕರ್ನಾಟಕದಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳಾಗಿ ಸೇವೆ ಸಲ್ಲಿಸಿದ ಲಾಲ್‌ ರುಖುಮೋ ಪಚಾವೊ ಮತ್ತು ಎಚ್.ಟಿ.ಸಾಂಗ್ಲಿಯಾನ ಮಿಜೋರಾಂನ ಮಕ್ಕಳು.

ಒಟ್ಟುನಲವತ್ತುವಿಧಾನಸಭಾಕ್ಷೇತ್ರಗಳಿಗೆಇದೇ28ರಂದು ಮತದಾನ ನಡೆಯಲಿದೆ.ಕಾಂಗ್ರೆಸ್ ಪಕ್ಷ 2008ರಲ್ಲಿ 32 ಮತ್ತು 2013ರಲ್ಲಿ 34ಸೀಟು ಗೆದ್ದಿತ್ತು.ಸರ್ಕಾರ ರಚಿಸಲು21ಸೀಟುಗಳ ಬಹುಮತ ಸಾಕು.ಈ ಸಲದ ಚುನಾವಣೆಯಲ್ಲಿ ಮುಖ್ಯವಾಗಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ.ಕಾಂಗ್ರೆಸ್,ಬಿಜೆಪಿ,ಎಂ.ಎನ್.ಎಫ್.ಕಣದಲ್ಲಿವೆ.ಸ್ಥಳೀಯ ಪಕ್ಷ ಎಂ.ಎನ್.ಎಫ್.ಬಿಜೆಪಿ ನೇತೃತ್ವದ ಈಶಾನ್ಯ ಜನತಾಂತ್ರಿಕ ಮಿತ್ರಕೂಟದ ಸದಸ್ಯ.ಆದರೆ ಬಿಜೆಪಿಯ ಜೊತೆ ಚುನಾವಣಾ ಪೂರ್ವ ಒಪ್ಪಂದ ಮಾಡಿಕೊಂಡಿಲ್ಲ.ಚುನಾವಣೆಯ ನಂತರ ಸರ್ಕಾರ ರಚಿಸಲು ಬಿಜೆಪಿ ಜೊತೆ ಕೈ ಜೋಡಿಸುವ ದಟ್ಟ ಸಾಧ್ಯತೆ ಇದೆ.

ADVERTISEMENT

‘ರಾಜ್ಯ ಕಾಂಗ್ರೆಸ್ ಸರ್ಕಾರದ ಮುಖ್ಯಮಂತ್ರಿ ಚುನಾವಣೆಗೆ ಮುನ್ನ ಬಿಜೆಪಿ ಸೇರಬಯಸಿದ್ದರು.ಡಿಸೆಂಬರ್11ರ ಫಲಿತಾಂಶಗಳ ನಂತರ ಕಾಂಗ್ರೆಸ್‌ನಬಹುಪಾಲು ಶಾಸಕರು ಬಿಜೆಪಿ ಸೇರುತ್ತಾರೆ'ಎಂದು ಬಿಜೆಪಿ ರಾಜ್ಯಾಧ್ಯಕ್ಷ ಜೆ.ವಿ.ಹುಲ್ನಾ ಮೊನ್ನೆ ಹೇಳಿಕೆ ನೀಡಿದ್ದರು. ‘ದೊಡ್ಡ ತಮಾಷೆ'ಎಂದು ಕಾಂಗ್ರೆಸ್ ಪ್ರತಿಕ್ರಿಯೆ ನೀಡಿತ್ತು.

ಈಶಾನ್ಯ ರಾಜ್ಯಗಳಲ್ಲಿ ಪಕ್ಷಗಳೇ ಸಾರಸಗಟಾಗಿ ಪಕ್ಷ ಬದಲಾಯಿಸುವ ರಾಜಕಾರಣ ಸರ್ವೇಸಾಧಾರಣ.ಕಳೆದ ಕೆಲ ವರ್ಷಗಳಿಂದ ಈಶಾನ್ಯವನ್ನು ಇಡಿಯಾಗಿ ಆಕ್ರಮಿಸಿಕೊಳ್ಳಲು ಬಿಜೆಪಿ ಹವಣಿಸಿದೆ.ಆಕ್ರಮಣಕಾರಿ ರಾಜಕಾರಣ ನಡೆಸಿದೆ.ಈ ದಿಸೆಯಲ್ಲಿ ಹುಲ್ನಾ ಮಾತನ್ನು ಸುಲಭಕ್ಕೆ ತಳ್ಳಿ ಹಾಕಲು ಬಾರದು.

ಬಿಜೆಪಿ ಈ ಹಿಂದೆ ಯಾವಾಗಲೂ ಇಲ್ಲಿ ಗೆದ್ದಿಲ್ಲ. ಬಿಜೆಪಿಗೆ ಇದು ತಾನು ಈಶಾನ್ಯದಲ್ಲಿ ಗೆಲ್ಲಬೇಕಿರುವ ಕಟ್ಟಕಡೆಯ ಕಿಲ್ಲೆ.ಉಳಿದ ಎಲ್ಲ ರಾಜ್ಯಗಳಲ್ಲಿ ಪ್ರತ್ಯಕ್ಷ-ಪರೋಕ್ಷವಾಗಿ ಅಧಿಕಾರದಲ್ಲಿದೆ. 2013ರಲ್ಲಿ17ಹುರಿಯಾಳುಗಳನ್ನು ಕಣಕ್ಕಿಳಿಸಿ ಒಟ್ಟು ಶೇ 0.37ರಷ್ಟು ಮತಗಳನ್ನು ಗಳಿಸಿತ್ತು.ಈ ಸಲ 39ಅಭ್ಯರ್ಥಿಗಳನ್ನು ಹೂಡಿದೆ.

ಕಳೆದ ಎರಡು ತಿಂಗಳಲ್ಲಿ ಕನಿಷ್ಠ ಐವರು ಕಾಂಗ್ರೆಸ್ ತಲೆಯಾಳುಗಳು ಪಕ್ಷ ತೊರೆದಿದ್ದಾರೆ.ಕಾಂಗ್ರೆಸ್ ಆಡಳಿತವಿರೋಧಿ ಅಲೆ ಎದುರಿಸಿರುವುದು ತನ್ನ ಪಾಲಿಗೆ ಅನುಕೂಲಕರ ಎನ್ನುತ್ತದೆ ಎಂ.ಎನ್.ಎಫ್. 2015ರಲ್ಲಿ ಮದ್ಯಪಾನ ನಿಷೇಧ ರದ್ದು ಮಾಡಿದ ನಂತರ ಕಳಪೆ ಮದ್ಯ ಆರೇಳು ಸಾವಿರ ಮಂದಿಯನ್ನು ಬಲಿ ತೆಗೆದುಕೊಂಡಿದೆ.ಈ ಪೈಕಿ500 ಮಂದಿ ಪೊಲೀಸರೇ ಇದ್ದಾರೆ.ಪುಟ್ಟ ರಾಜ್ಯದ ಪಾಲಿಗೆ ಈ ದುರಂತದ ಸಂಖ್ಯೆ ದೊಡ್ಡದು.ಚರ್ಚ್ ಮತ್ತು ನಾಗರಿಕ ಸಮಾಜ ಈ ಬೆಳವಣಿಗೆಯ ಕುರಿತು ಆತಂಕ ವ್ಯಕ್ತಪಡಿಸಿವೆ. ಮಾದಕದ್ರವ್ಯ ಸೇವನೆಯೂ ಹದ್ದು ಮೀರಿದೆ ಎನ್ನುತ್ತಾರೆ ಝೋರ್ಮತಂಗಾ.

ಕಾಂಗ್ರೆಸ್ ಸತತ ಮೂರನೆಯ ಸಲ ಗೆದ್ದು ಹ್ಯಾಟ್ರಿಕ್ ಸಾಧಿಸೀತೇ ಅಥವಾ ರಾಜ್ಯಾಧಿಕಾರ ಎಂ.ಎನ್.ಎಫ್.ಗೆ ಒಲಿದೀತೇ ಎಂದು ಕಾದು ನೋಡಬೇಕಿದೆ.

ಬಿದಿರು–ಇಲಿಗಳು ರೂಪಿಸಿದ ರಾಜ್ಯ

ಮಿಜೋರಾಂ ಪ್ರತ್ಯೇಕತೆಯ ಹೋರಾಟಕ್ಕೆ ಪ್ರೇರಕವಾಗಿದ್ದು ಇಲಿಗಳು ಎಂಬುದು ವಿಚಿತ್ರವಾದರೂ ಸತ್ಯ.ಐವತ್ತು ವರ್ಷಕ್ಕೊಮ್ಮೆ ಬಿದಿರು ಹೂ ಬಿಟ್ಟು ‘ಸಾಯುವ’ ಕ್ರಿಯೆಯನ್ನು ಮಿಜೋ ಭಾಷೆಯಲ್ಲಿ ‘ಮೌತಂ’ ಎನ್ನುತ್ತಾರೆ.ಈ ‘ಬಿದಿರು ಮರಣ’ದ ಬೆನ್ನಿಗೇ ‘ಮೂಷಿಕ ಪ್ರವಾಹ’ ಏರ್ಪಡುತ್ತದೆ.ಹೇರಳವಾಗಿ ದೊರೆಯುವ ಬಿದಿರು ಬೀಜಗಳನ್ನು ಮೆದ್ದ ಇಲಿಗಳ ಸಂತಾನಕ್ರಿಯೆಗೆ ಭಾರಿ ರಭಸ ದೊರೆಯುತ್ತದೆ.ಬಿದಿರು ಬೀಜ ಖಾಲಿಯಾದ ನಂತರ ಲಕ್ಷಾಂತರ ಇಲಿಗಳು ರೈತರ ಹೊಲಗಳು ಮತ್ತು ಉಗ್ರಾಣಗಳಿಗೆ ದಾಳಿ ಇಡುತ್ತವೆ. ಪರಿಣಾಮವಾಗಿ ಕ್ಷಾಮ ಉಂಟಾದ ಉದಾಹರಣೆಗಳಿವೆ.

ಮಿಜೋರಾಂ ಇನ್ನೂ ಅಸ್ಸಾಂ ರಾಜ್ಯದ ಭಾಗವಾಗಿದ್ದ1958-59ರ ದಿನಗಳು.ಬಿದಿರು ಮರಣ-ಮೂಷಿಕ ಪ್ರವಾಹ-ಕ್ಷಾಮಕ್ಕೆ ನೂರಕ್ಕೂ ಹೆಚ್ಚು ಮಿಜೋಗಳು ಬಲಿಯಾದರು.ಫಸಲು, ಆಸ್ತಿಪಾಸ್ತಿ ನಷ್ಟ ಆಯಿತು.ಒಂದು ಇಲಿ ಬಾಲಕ್ಕೆ40ಪೈಸೆ ಬಹುಮಾನ ಘೋಷಿಸಿದ ನಂತರ20ಲಕ್ಷ ಇಲಿಗಳನ್ನು ಕೊಲ್ಲಲಾಯಿತಂತೆ.ಆದರೂ ಕ್ಷಾಮವನ್ನು ತಡೆಯಲು ಅಸ್ಸಾಂ ಸರ್ಕಾರ ವಿಫಲವಾಗಿತ್ತು.ನಿರ್ಲಕ್ಷ್ಯವನ್ನು ಪ್ರತಿಭಟಿಸಿ ಹುಟ್ಟಿದ ‘ಮಿಜೋ ನ್ಯಾಷನಲ್ ಫೆಮೈನ್ ಫ್ರಂಟ್’ (ಮಿಜೋ ರಾಷ್ಟ್ರೀಯ ಕ್ಷಾಮ ರಂಗ)ವ್ಯಾಪಕ ಪರಿಹಾರ ಶಿಬಿರಗಳನ್ನು ನಡೆಸಿತು.ಇದೇ ರಂಗ ಮುಂದೆ ಮಿಜೋ ರಾಷ್ಟ್ರೀಯ ರಂಗ(ಎಂ.ಎನ್.ಎಫ್)ಹೆಸರಿನ ಸಶಸ್ತ್ರ ಬಂಡುಕೋರ ಗುಂಪಿನ ರೂಪ ತಳೆಯಿತು.

ಲಾಲ್ ಡೆಂಗಾ ಎಂಬ ಬ್ಯಾಂಕ್ ಉದ್ಯೋಗಿಯ ನೇತೃತ್ವದಲ್ಲಿ ಭಾರತೀಯ ಸೇನೆಯ ವಿರುದ್ಧ ಎರಡು ದಶಕಗಳ ಕಾಲ ಪ್ರತ್ಯೇಕತೆಯ ಹೋರಾಟ ನಡೆಸಿತು. 1986ರಲ್ಲಿ ಪ್ರತ್ಯೇಕ ರಾಜ್ಯವಾಯಿತು. 2006ರಲ್ಲಿ ಪುನಃ ಬಿದಿರಿನ ಮರಣ-ಮೂಷಿಕ ಪ್ರವಾಹ ಎದುರಿಸಲು ಮಿಜೋರಾಂನಲ್ಲಿ ಭಾರತೀಯ ಸೇನೆಯ ನಿಯುಕ್ತಿ ಆಗಿತ್ತು. ಇಲಿಗಳನ್ನು ದೂರ ಇಡಲು ದೊಡ್ಡ ಪ್ರಮಾಣದಲ್ಲಿ ಶುಂಠಿ ಮತ್ತು ಅರಿಶಿಣ ಬೆಳೆಯಲಾಯಿತು.ಹನ್ನೆರಡು ವರ್ಷ ಕಾಲ ಎಂ.ಎನ್.ಎಫ್.ಸರ್ಕಾರ ನಡೆಸಿದೆ.ಲಾಲ್ಡೆಂಗಾ ಮತ್ತು ಝೋರ್ಮತಂಗಾ ಈ ಸರ್ಕಾರಗಳ ಮುಖ್ಯಮಂತ್ರಿಗಳು. 1989-98,ಹಾಗೂ1998ರಿಂದ ಇಲ್ಲಿಯತನಕ ಕಾಂಗ್ರೆಸ್ ಪಕ್ಷದ ಲಾಲ್ಥಾನ್ಹಾವ್ಲಾ ಮುಖ್ಯಮಂತ್ರಿ.ಈಗಲೂ ಮುಖ್ಯ ಮುಖಾಮುಖಿ ಝೋರ್ಮತಂಗಾ ಮತ್ತು ಲಾಲ್ಥಾನ್ಹಾವ್ಲಾ ನಡುವೆಯೇ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.