ADVERTISEMENT

Mizoram Exit Poll: ಅತಂತ್ರ ವಿಧಾನಸಭೆಯ ಭವಿಷ್ಯ ನುಡಿದ ಸಮೀಕ್ಷೆಗಳು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 30 ನವೆಂಬರ್ 2023, 13:48 IST
Last Updated 30 ನವೆಂಬರ್ 2023, 13:48 IST
Venugopala K.
   Venugopala K.

ನವದೆಹಲಿ: ಆಡಳಿತಾರೂಢ ಮಿಜೋ ನ್ಯಾಷನಲ್ ಫ್ರಂಟ್ (ಎಂಎನ್‌ಎಫ್), ವಿರೋಧ ಪಕ್ಷವಾದ ಜೋರಾಮ್ ಪೀಪಲ್ಸ್ ಪಾರ್ಟಿ (ಜೆಡ್‌ಪಿಎಂ) ಮತ್ತು ಕಾಂಗ್ರೆಸ್ ನಡುವೆ ತ್ರಿಕೋನ ಸ್ಪರ್ಧೆಯನ್ನು ಕಂಡ ಮಿಜೋರಾಂ ರಾಜ್ಯದ ಮತಗಟ್ಟೆ ಸಮಿಕ್ಷೆ ಹೊರಬಿದ್ದಿದ್ದು, ಅತಂತ್ರ ವಿಧಾನಸಭೆಯ ಸೂಚನೆ ಸಿಕ್ಕಿದೆ. 40 ಸದಸ್ಯ ಬಲದ ಮಿಜೋರಾಂ ವಿಧಾನಸಭೆಯಲ್ಲಿ 21 ಸ್ಥಾನ ಪಡೆದವರು ಅಧಿಕಾರದ ಗದ್ದುಗೆ ಏರುತ್ತಾರೆ.

ಮಿಜೋರಾಂನ ಮಿಜೋ ನ್ಯಾಷನಲ್ ಫ್ರಂಟ್‌ ಗರಿಷ್ಠ ಸ್ಥಾನಗಳನ್ನು ಪಡೆಯಲಿದೆ ಎಂದು ಇಂಡಿಯಾ ಟಿವಿ-ಸಿಎನ್‌ಎಕ್ಸ್ ಸಮೀಕ್ಷೆ ಹೇಳಿದೆ. ಆದರೆ, ಅಧಿಕಾರದ ಗದ್ದುಗೆ ಏರಲು ಬೇಕಿರುವ 21 ಸ್ಥಾನಗಳನ್ನು ಪಡೆಯುವುದಿಲ್ಲ ಎಂದು ಅಂದಾಜಿಸಿದೆ.

ಇಂಡಿಯಾ ಟಿವಿ-ಸಿಎನ್‌ಎಕ್ಸ್ ಸಮೀಕ್ಷೆ

* ಎಂಎನ್‌ಎಫ್: 14-18

ADVERTISEMENT

* ಜೆಡ್‌ಪಿಎಂ: 12-16

* ಕಾಂಗ್ರೆಸ್‌: 8-10

* ಬಿಜೆಪಿ: 0-2

ಜನ್ ಕಿ ಬಾತ್ ಸಮೀಕ್ಷೆ

* ಜೆಡ್‌ಪಿಎಂ: 15 – 25

* ಎಂಎನ್‌ಎಫ್‌: 10 – 14

* ಕಾಂಗ್ರೆಸ್: 5 – 9

* ಬಿಜೆಪಿ: 0 –2

ಇಂಡಿಯಾ ಟಿವಿ–ಸಿಎನ್‌ಎಕ್ಸ್

* ಎಂಎನ್‌ಎಫ್: 14-18

* ಜೆಡ್‌ಪಿಎಂ: 12-16

* ಕಾಂಗ್ರೆಸ್: 8-10

* ಬಿಜೆಪಿ: 0-2

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.