ಐಜ್ವಾಲ್: ಅಂತರರಾಷ್ಟ್ರೀಯ ಗಡಿಯನ್ನು ಪದೇ ಪದೇ ದಾಟುತ್ತಿರುವ ಮ್ಯಾನ್ಮಾರ್‌ನ ನಿರಾಶ್ರಿತರ ಗುರುತಿನ ಚೀಟಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಮಿಜೋರಾಂ ಸರ್ಕಾರ ಚಿಂತಿಸಿದೆ.
ಮುಖ್ಯಮಂತ್ರಿ ಲಾಲ್ಡುಹೋಮಾ ಅವರು ಐಜ್ವಾಲ್‌ನಲ್ಲಿ ವಿದೇಶಾಂಗ ಸಚಿವಾಲಯದ ಜಂಟಿ ಕಾರ್ಯದರ್ಶಿ ಸುರಿಂದರ್ ಭಗತ್ ಅವರೊಂದಿಗೆ ಗುರುವಾರ ನಡೆಸಿದ ಸಭೆಯಲ್ಲಿ ಈ ವಿಷಯ ಪ್ರಸ್ತಾಪಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ಶುಕ್ರವಾರ ತಿಳಿಸಿದ್ದಾರೆ.
‘ನಿರಾಶ್ರಿತರಲ್ಲಿ ಅನೇಕರು ವಿಧೇಯರಿದ್ದಾರೆ. ಆದರೆ, ಕೆಲವರು ನೆರೆಯ ದೇಶದ ಬಿಕ್ಕಟ್ಟಿನ ಲಾಭ ಪಡೆಯಲಿಕ್ಕಾಗಿ ಪದೇ ಪದೇ ಅಂತರರಾಷ್ಟ್ರೀಯ ಗಡಿಯನ್ನು ದಾಟುತ್ತಿದ್ದಾರೆ. ಇಂತಹವರ ವಿರುದ್ಧ ರಾಜ್ಯ ಸರ್ಕಾರ ಕಠಿಣ ಕ್ರಮ ಕೈಗೊಳ್ಳಲಿದೆ’ ಎಂದು ಲಾಲ್ಡುಹೋಮಾ ಅವರು ಭಗತ್‌ಗೆ ತಿಳಿಸಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಮಿಜೋರಾಂನಲ್ಲಿ ಆಶ್ರಯ ಪಡೆದಿರುವ ಮ್ಯಾನ್ಮಾರ್‌ನ ನಿರಾಶ್ರಿತರ ಬಯೋಮೆಟ್ರಿಕ್ ವಿವರಗಳನ್ನು ಸಂಗ್ರಹಿಸುವ ರಾಜ್ಯ ಸರ್ಕಾರದ ಯೋಜನೆಯ ಬಗ್ಗೆಯೂ ಭಗತ್ ಅವರಿಗೆ ಮುಖ್ಯಮಂತ್ರಿ ವಿವರಿಸಿದರು.
ಮ್ಯಾನ್ಮಾರ್ ನಿರಾಶ್ರಿತರ ಬಯೋಮೆಟ್ರಿಕ್ ದಾಖಲಾತಿಯನ್ನು ರಾಜ್ಯ ಸರ್ಕಾರ ಜುಲೈನಲ್ಲಿ ಆರಂಭಿಸುವ ಸಾಧ್ಯತೆಯಿದೆ ಎಂದು ಮತ್ತೊಬ್ಬ ಅಧಿಕಾರಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.