ADVERTISEMENT

ಪ್ರಧಾನಿ ಜತೆ ನಿರ್ಭೀತಿಯಿಂದ ಚರ್ಚಿಸುವರರ ಅಗತ್ಯವಿದೆ: ಮುರಳಿ ಮನೋಹರ ಜೋಷಿ

ಪಕ್ಷದಲ್ಲಿ ಚರ್ಚೆ ಸ್ಥಬ್ಧಗೊಂಡಿವೆ ಎಂದ ಹಿರಿಯ ನಾಯಕ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2019, 18:30 IST
Last Updated 4 ಸೆಪ್ಟೆಂಬರ್ 2019, 18:30 IST
ಮುರಳಿ ಮನೋಹರ ಜೋಷಿ
ಮುರಳಿ ಮನೋಹರ ಜೋಷಿ   

ನವದೆಹಲಿ: ಪ್ರಧಾನಿ ಅವರ ಜತೆ ಧೈರ್ಯದಿಂದ ಮಾತನಾಡಬಲ್ಲ, ಅವರೊಂದಿಗೆ ವಾದ ಮಾಡಬಲ್ಲ ನಾಯಕತ್ವ ಭಾರತಕ್ಕೆ ಅಗತ್ಯವಿದೆ ಎಂದು ಬಿಜೆಪಿ ಹಿರಿಯ ಮುಖಂಡ ಮುರಳಿ ಮನೋಹರ ಜೋಷಿ ಅಭಿಪ್ರಾಯಪಟ್ಟಿದ್ದಾರೆ.

ಹಿರಿಯ ಕಾಂಗ್ರೆಸ್ ಮುಖಂಡ ಜೈಪಾಲ್ ರೆಡ್ಡಿ ಅವರ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಜೋಷಿ ಮಂಗಳವಾರ ಮಾತನಾಡಿದರು.

‘ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಹತ್ವದ ವಿದ್ಯಮಾನಗಳ ಕುರಿತು ಪಕ್ಷದ ಎಲ್ಲ ಸ್ತರಗಳಲ್ಲಿಯೂ ಚರ್ಚೆಗಳು ಸ್ಥಗಿತಗೊಂಡಿದ್ದು, ಅವು ಪುನರಾರಂಭ ಆಗಬೇಕಿವೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.

ADVERTISEMENT

‘ಪ್ರಧಾನಿ ಎದುರು ಅಭಿಪ್ರಾಯಗಳನ್ನು ಸ್ಪಷ್ಟವಾಗಿ ವ್ಯಕ್ತಪಡಿಸುವ, ಪ್ರಧಾನಿ ಖುಷಿಪಡುತ್ತಾರೋ ಅಥವಾ ಬೇಸರಗೊಳ್ಳುತ್ತಾರೋ ಎಂಬುದರ ಬಗ್ಗೆ ಚಿಂತಿಸದೇ ಸಂವಾದ ನಡೆಸುವ ವ್ಯಕ್ತಿಗಳು ಬೇಕಾಗಿದ್ದಾರೆ’ ಎಂದು ಜೋಷಿ ಹೇಳಿದ್ದಾರೆ.

ಪಕ್ಷದ ನಾಯಕತ್ವವನ್ನು ಟೀಕಿಸುವ ಜೋಷಿ ಅವರಿಗೆ ಲೋಕಸಭಾ ಚುನಾವಣೆಯ ಟಿಕೆಟ್ ನಿರಾಕರಿಸಲಾಗಿತ್ತು. ಅಡ್ವಾಣಿ ಅವರ ಜೊತೆ ಜೋಷಿ ಅವರಿಗೂ ಚುನಾವಣೆಯಿಂದ ಒತ್ತಾಯದ ನಿವೃತ್ತಿ ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.