ADVERTISEMENT

ವೈರಾಣು ತಜ್ಞ ಜಮೀಲ್ ರಾಜೀನಾಮೆ: ಮೋದಿ ವಿರುದ್ಧ ಕಾಂಗ್ರೆಸ್‌ನ ಜೈರಾಮ್ ರಮೇಶ್ ಟೀಕೆ

​ಪ್ರಜಾವಾಣಿ ವಾರ್ತೆ
Published 17 ಮೇ 2021, 11:28 IST
Last Updated 17 ಮೇ 2021, 11:28 IST
ಜೈರಾಂ ರಮೇಶ್
ಜೈರಾಂ ರಮೇಶ್   

ನವದೆಹಲಿ: ಕೊರೊನಾ ವೈರಸ್‌ನ ರೂಪಾಂತರಗಳನ್ನು ಪತ್ತೆಹಚ್ಚಲು ಕೇಂದ್ರ ಸರ್ಕಾರವು ರಚಿಸಿರುವ ಉನ್ನತ ವೈಜ್ಞಾನಿಕ ಸಲಹೆಗಾರರ ವೇದಿಕೆಯ ಅಧ್ಯಕ್ಷ ಸ್ಥಾನಕ್ಕೆ ವೈರಾಣು ತಜ್ಞ ಡಾ.ಶಾಹೀದ್ ಜಮೀಲ್ ಅವರು ರಾಜೀನಾಮೆ ನೀಡಿರುವ ಕುರಿತು ಕಾಂಗ್ರೆಸ್ ಪಕ್ಷವು ಕೇಂದ್ರ ಸರ್ಕಾರವನ್ನು ಗುರಿಯಾಗಿಸಿಕೊಂಡು ಟೀಕೆ ಮಾಡಿದೆ.

‘ದೇಶದ ಅತ್ಯುತ್ತಮ ವೈರಾಣು ತಜ್ಞರಲ್ಲೊಬ್ಬರಾಗಿದ್ದ ಡಾ. ಶಾಹೀದ್ ಜಮೀಲ್ ಅವರು ರಾಜೀನಾಮೆ ಸಲ್ಲಿಸಿರುವುದು ನೋವಿನ ಸಂಗತಿ. ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರದಲ್ಲಿ ಭಯವಿಲ್ಲದೆ ಮುಕ್ತವಾಗಿ ಮಾತನಾಡುವ ವೃತ್ತಿಪರರಿಗೆ ಸ್ಥಾನವಿಲ್ಲ’ ಎಂದು ಕಾಂಗ್ರೆಸ್‌ನ ಹಿರಿಯ ನಾಯಕ ಜೈರಾಮ್ ರಮೇಶ್ ಹೇಳಿದ್ದಾರೆ.

‘ದಿ ನ್ಯೂಯಾರ್ಕ್ ಟೈಮ್ಸ್’ ನಲ್ಲಿ ಡಾ. ಶಾಹೀದ್ ಜಮೀಲ್ ಅವರು ಕೊರೊನಾ ವೈರಸ್‌ಗೆ ಸಂಬಂಧಿಸಿದಂತೆ ಲೇಖನವೊಂದನ್ನು ಬರೆದಿದ್ದರು. ಈ ಲೇಖನ ಪ್ರಕಟವಾದ ಕೆಲವೇ ದಿನಗಳಲ್ಲಿ ಜಮೀಲ್ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.

ADVERTISEMENT

‘ಭಾರತದಲ್ಲಿ ಸಾಕ್ಷ್ಯ ಆಧಾರಿತ ನೀತಿ ನಿರೂಪಣೆಗೆ ಪ್ರತಿರೋಧವನ್ನು ಎದುರಿಸಲಾಗುತ್ತಿದೆ’ ಎಂದು ಜಮೀಲ್ ಅವರು ತಮ್ಮ ಲೇಖನದಲ್ಲಿ ಪ್ರತಿಪಾದಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.