ADVERTISEMENT

‘ಮೋದಿ–ಶಾ ಸಂಬಂಧ ಅನನ್ಯ’

ಪಿಟಿಐ
Published 9 ಡಿಸೆಂಬರ್ 2018, 19:45 IST
Last Updated 9 ಡಿಸೆಂಬರ್ 2018, 19:45 IST
   

ನವದೆಹಲಿ: ‘ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ಅಧ್ಯಕ್ಷ ಅಮಿತ್ ಶಾ ನಡುವಿನ ಸಂಬಂಧ ಆದರ್ಶಯುತ ಹಾಗೂ ಅನನ್ಯವಾದುದು’

–ಬಿಜೆಪಿಯ ತರಬೇತಿ ಹಾಗೂ ಪ್ರಕಟಣೆ ವಿಭಾಗದ ಸಹ ಸಂಚಾಲಕ ಆರ್. ಬಾಲಶಂಕರ್ ಅವರು ಬರೆದಿರುವ ‘ನರೇಂದ್ರ ಮೋದಿ: ಕ್ರಿಯೇಟಿವ್ ಡಿಸ್‌ರಪ್ಟರ್, ದಿ ಮೇಕರ್ ಆಫ್ ನ್ಯೂ ಇಂಡಿಯಾ’ ಎಂಬ ಪುಸ್ತಕದಲ್ಲಿ ಈ ರೀತಿ ಉಲ್ಲೇಖಿಸಲಾಗಿದೆ. ಇವರು ಆರ್ಗನೈಸರ್ ಎಂಬ ಪತ್ರಿಕೆಯ ಸಂಪಾದಕರೂ ಆಗಿದ್ದರು.

ಈ ಪುಸ್ತಕವನ್ನು ಅಮಿತ್ ಶಾ ಅವರು ಸೋಮವಾರ ಬಿಡುಗಡೆ ಮಾಡಲಿದ್ದಾರೆ.

ADVERTISEMENT

ಶಾ ಅವರ ಮೇಲೆ ಮೋದಿ ಅವರಿಗೆ ಭಾರಿ ವಿಶ್ವಾಸವಿದ್ದು, ಅತ್ಯಂತ ಸವಾಲಿನ ಕೆಲಸಗಳನ್ನು ಅವರಿಗೆ ವಹಿಸುತ್ತಾರೆ. ಇತರೆ ಪಕ್ಷಗಳ ಅಧ್ಯಕ್ಷರಿಗೆ ಹೋಲಿಸಿದರೆ ಬಿಜೆಪಿ ಅಧ್ಯಕ್ಷರಾಗಿ ಶಾ ಅವರು ಹಲವು ದಾಖಲೆಗಳನ್ನು ಮಾಡಿದ್ದಾರೆ’ ಎಂದು‘ಮೋದಿ–ಶಾ ತಂಡ’ ಎಂಬ ಅಧ್ಯಾಯದಲ್ಲಿ ಬರೆಯಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.