
ಪ್ರಜಾವಾಣಿ ವಾರ್ತೆ
ಪಿಟಿಐಸೇವಾ ತೀರ್ಥ ಕಟ್ಟಡದ ಹೊರಭಾಗ
ಚಿತ್ರ: ಎಕ್ಸ್
ನವದೆಹಲಿ: ಸುಮಾರು 126 ವರ್ಷಗಳ ಇತಿಹಾಸವಿದ್ದ ಬ್ರಿಟಿಷ್ ಕಾಲದ ವಾಸ್ತುಶಿಲ್ಪದಲ್ಲಿ ನಿರ್ಮಾಣಗೊಂಡಿದ್ದ ಸಂಸತ್ ಕಾರ್ಯಾಲಯವು ಈಗ ಇತಿಹಾಸದ ಪುಟ ಸೇರಲಿದೆ. ಪ್ರಧಾನ ಮಂತ್ರಿ ಕಚೇರಿಯೂ ಸೇರಿ ಹಲವು ಸಚಿವಾಲಯಗಳ ಕಚೇರಿಯು ಈಗ ಸೇವಾ ತೀರ್ಥ ಮತ್ತು ಕರ್ತವ್ಯ ಭವನಕ್ಕೆ ಸ್ಥಳಾಂತರಗೊಳ್ಳಲಿದೆ.
ಪ್ರಧಾನಿ ಕಚೇರಿ ಒಳಗೊಂಡ ‘ಸೇವಾ ತೀರ್ಥ’ ಮತ್ತು ವಿವಿಧ ಸಚಿವಾಲಯಗಳ ಕಚೇರಿಗಳಿರುವ ಕರ್ತವ್ಯ ಭವನ 1 ಮತ್ತು 2 ಅನ್ನು ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಉದ್ಘಾಟಿಸಲಿದ್ದಾರೆ.
ತಮ್ಮ ಕಚೇರಿಯಲ್ಲಿ ಶುಕ್ರವಾರದಂದು ಪ್ರಧಾನಿ ಮೋದಿ ಅವರು ಕೊನೇ ಸಂಪುಟ ಸಭೆ ನಡೆಸಲಿದ್ದಾರೆ. ಸಭೆ ಬಳಿಕ ಕಚೇರಿಯ ಸ್ಥಳಾಂತರ ಕಾರ್ಯ ಆರಂಭಗೊಳ್ಳಲಿವೆ. ‘ಯುಗೇ ಯುಗೀನ್ ಭಾರತ್ ನ್ಯಾಷನಲ್ ಮ್ಯೂಸಿಯಂ’ ಯೋಜನೆಯ ಭಾಗವಾಗಿ ಈ ಹಳೇ ಕಟ್ಟಡಗಳನ್ನೂ ಮ್ಯೂಸಿಯಂ ಆಗಿ ಪರಿವರ್ತಿಸಲಾಗುವುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.