ADVERTISEMENT

ಪ್ರಾಚೀನ ಭಾರತೀಯರು ಮತಾಂತರಿಸಿಲ್ಲ: ಭಾಗವತ್

ಪಿಟಿಐ
Published 19 ಅಕ್ಟೋಬರ್ 2025, 13:18 IST
Last Updated 19 ಅಕ್ಟೋಬರ್ 2025, 13:18 IST
<div class="paragraphs"><p>ಮೋಹನ್ ಭಾಗವತ್&nbsp;&nbsp;</p></div>

ಮೋಹನ್ ಭಾಗವತ್  

   

ಮುಂಬೈ: ಪ್ರಚಂಚದಾದ್ಯಂತ ಪ್ರವಾಸ ಮಾಡಿದ್ದ ಪ್ರಾಚೀನ ಕಾಲದ ಭಾರತೀಯರು ಸಂಸ್ಕೃತಿಯನ್ನು ಮತ್ತು ವಿಜ್ಞಾನವನ್ನು ಪ್ರಚಾರ ಮಾಡಿದರೇ ವಿನಾ ಆಕ್ರಮಣವನ್ನಾಗಲೀ ಧಾರ್ಮಿಕ ಮತಾಂತರವನ್ನಾಗಲೀ ಮಾಡಲಿಲ್ಲ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್‌) ಮುಖ್ಯಸ್ಥ ಮೋಹನ್ ಭಾಗವತ್ ಭಾನುವಾರ ಹೇಳಿದ್ದಾರೆ.

ಇಲ್ಲಿ ಆರ್ಯ ಯುಗ ವಿಷಯ ಕೋಶ ವಿಶ್ವಕೋಶವನ್ನು ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, ಹಲವಾರು ಆಕ್ರಮಣಕಾರರು ಭಾರತವನ್ನು ಲೂಟಿ ಮಾಡಿ ಗುಲಾಮರನ್ನಾಗಿ ಮಾಡಿದರು ಮತ್ತು ಕೊನೆಯಲ್ಲಿ ಆಕ್ರಮಣ ಮಾಡಿದವರು ಭಾರತೀಯರ ಮನಸ್ಸನ್ನು ಲೂಟಿ ಮಾಡಿದರು ಎಂದಿದ್ದಾರೆ.

ADVERTISEMENT

‘ನಮ್ಮ ಪೂರ್ವಜನರು ಮೆಕ್ಸಿಕೋದಿಂದ ಸೈಬೀರಿಯಾದವರೆಗೆ ಪ್ರವಾಸ ಕೈಗೊಂಡು ವಿಜ್ಞಾನ ಮತ್ತು ಸಂಸ್ಕೃತಿಯನ್ನು ಕಲಿಸಿದರು. ಅವರು ಯಾರನ್ನೂ ಮತಾಂತರ ಮಾಡಲಿಲ್ಲ. ಸದ್ಭಾವನೆ ಮತ್ತು ಏಕತೆಯ ಸಂದೇಶ ಸಾರಿದ್ದರು’ ಎಂದು ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.