ADVERTISEMENT

ಮೋಮೊ ಆಮಿಷ: ₹85 ಲಕ್ಷದ ಆಭರಣ ವಂಚನೆ

ಪಿಟಿಐ
Published 2 ಫೆಬ್ರುವರಿ 2026, 15:54 IST
Last Updated 2 ಫೆಬ್ರುವರಿ 2026, 15:54 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ದೇವ್ರಿಯಾ: ಮೂವರು ಯುವಕರು ಬಾಲಕನೊಬ್ಬನಿಗೆ ಮೋಮೊ ತಿನ್ನಿಸಿ ₹85 ಲಕ್ಷ ಮೌಲ್ಯದ ಆಭರಣಗಳನ್ನು ವಂಚಿಸಿದ್ದಾರೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.

ಉತ್ತರ ಪ್ರದೇಶದ ದೇವ್ರಿಯಾದ ರಾಂಪುರ ಕಾರ್ಖಾನಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಆರೋಪಿಗಳು ದುಮ್ರಿ ಚೌರಾಹಾದಲ್ಲಿ ಮೋಮೊ ಅಂಗಡಿ ನಡೆಸುತ್ತಿದ್ದರು.

ಮನೆಯ ಕಪಾಟಿನಿಂದ ಆಭರಣಗಳು ಕಾಣೆಯಾಗಿದ್ದು, ಬಾಲಕನ ಸಹೋದರಿಗೆ ತಿಳಿದ ನಂತರ ವಿಷಯ ಬೆಳಕಿಗೆ ಬಂದಿದೆ.

ADVERTISEMENT

‘ಶಿಕ್ಷಣಕ್ಕಾಗಿ ಹಳ್ಳಿಯಲ್ಲಿರುವ ತನ್ನ ಮಗನೊಂದಿಗೆ ಆರೋಪಿಗಳು ಸ್ನೇಹ ಬೆಳೆಸಿದ್ದರು. ಅವರು ನೀಡಿದ್ದ ಮೋಮೊಗೆ ಬದಲಾಗಿ ಬಾಲಕ ಮನೆಯ ಆಭರಣಗಳನ್ನು ಒಪ್ಪಿಸಿದ್ದನು’ ಎಂದು ಬಾಲಕನ ತಂದೆ ವಿಮಲೇಶ್ ಮಿಶ್ರಾ ಹೇಳಿದ್ದಾರೆ.

ಬಾಲಕ 7ನೇ ತರಗತಿಯ ವಿದ್ಯಾರ್ಥಿಯಾಗಿದ್ದು, ಆತನ ತಂದೆಯ ದೂರಿನ ನಂತರ ಎಫ್‌ಐಆರ್‌ ದಾಖಲಾಗಿದೆ. ತಲೆಮರೆಸಿಕೊಂಡಿರುವ ಆರೋಪಿಗಳನ್ನು ಪತ್ತೆಹಚ್ಚುವ ಪ್ರಯತ್ನಗಳು ನಡೆಯುತ್ತಿದ್ದು, ವಿವರವಾದ ತನಿಖೆ ನಡೆಯುತ್ತಿದೆ ಎಂದು ಠಾಣಾಧಿಕಾರಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.