ADVERTISEMENT

ಜುಲೈ 3ರ ವಿಶ್ವದ ಅತಿ ಹೆಚ್ಚು ಬಿಸಿಯ ದಿನ

ಎಎಫ್‌ಪಿ
Published 5 ಜುಲೈ 2023, 23:30 IST
Last Updated 5 ಜುಲೈ 2023, 23:30 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಪ್ಯಾರಿಸ್‌: ಜುಲೈ 3ರ ಸೋಮವಾರವು ಜಗತ್ತಿನಲ್ಲಿ ಈವರೆಗಿನ ಅತಿಹೆಚ್ಚು ಬಿಸಿಯ ದಿನವಾಗಿತ್ತು ಎಂದು ಅಮೆರಿಕದ ಹವಾಮಾನ ಶಾಸ್ತ್ರಜ್ಞರು ತಿಳಿಸಿದ್ದಾರೆ.

ಅಂದು ಭೂ ಮೇಲ್ಮೈನಲ್ಲಿ ಜಾಗತಿಕ ಸರಾಸರಿ ತಾಪಮಾನವು 17.01 ಸೆಲ್ಸಿಯಸ್‌ (62.6 ಡಿಗ್ರಿ ಫ್ಯಾರನ್ಹೀಟ್) ದಾಖಲಾಗಿದೆ ಎಂದು ಅಮೆರಿಕದ ರಾಷ್ಟ್ರೀಯ ಸಾಗರ ಮತ್ತು ವಾಯುಮಂಡಲ ಆಡಳಿತ (ಎನ್‌ಒಎಎ) ತಿಳಿಸಿದೆ.

ಕಳೆದ ವರ್ಷದ ಜುಲೈ 24ರಂದು ಜಾಗತಿಕ ಸರಾಸರಿ ತಾ‍ಪಮಾನವು 16.92 ಸೆಲ್ಸಿಯಸ್‌ಗೆ ಏರಿಕೆಯಾಗಿತ್ತು. ಸೋಮವಾರದ ತಾಪಮಾನವು ಈ ದಾಖಲೆಯನ್ನು ಮೀರಿದೆ. 

ADVERTISEMENT

ಜಾಗತಿಕ ತಾಪಮಾನದ ಏರಿಳಿತ ಸಹಜವಾದುದು. ಸರಾಸರಿ 12ರಿಂದ 17 ಸೆಲ್ಸಿಯಸ್‌ ನಷ್ಟಿರುತ್ತದೆ. 1979ರಿಂದ 2000ರ ಅವಧಿಯಲ್ಲಿ ಸರಾಸರಿ ತಾ‍ಪಮಾನವು 16.2 ಸೆಲ್ಸಿಯಸ್‌ ದಾಖಲಾಗಿತ್ತು ಎಂದು ಎನ್‌ಒಎಎ ಹೇಳಿದೆ.

ವಿವಿಧ ಅಳತೆ ಗೋಲುಗಳನ್ನು ಆಧರಿಸಿ ಈ ತಾಪಮಾನವನ್ನು ದಾಖಲಿಸಲಾಗಿದೆ. ಪ್ರಸ್ತುತ ಉತ್ತರ ಗೋಳಾರ್ಧದಲ್ಲಿ ಬೇಸಿಗೆ ಕಾಲ ಆರಂಭವಾಗಿದೆ. ಹಾಗಾಗಿ, ತಾಪಮಾನ ಮತ್ತಷ್ಟು ಹೆಚ್ಚಳವಾಗಲಿದೆ. ಜುಲೈ ಅಂತ್ಯ ಅಥವಾ ಆಗಸ್ಟ್‌ ಆರಂಭದ ವೇಳೆಗೆ ಈ ದಾಖಲೆಯನ್ನೂ ಮೀರಬಹುದು ಎಂದು ಹೇಳಿದೆ.

ಎಲ್‌ ನಿನೊ ಪರಿಣಾಮ ಮುಂದಿನ ವರ್ಷ ಜಾಗತಿಕ ತಾಪಮಾನವು ಮತ್ತಷ್ಟು ಏರಿಕೆಯಾಗಬಹುದು ಎಂದು ವಿಶ್ವ ಹವಾಮಾನ ಸಂಘಟನೆ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.