ADVERTISEMENT

ಸಾಲದ ಆ್ಯಪ್: ಚೀನಾದ ವ್ಯಕ್ತಿ ಬಂಧನ

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2020, 19:38 IST
Last Updated 31 ಡಿಸೆಂಬರ್ 2020, 19:38 IST

ಹೈದಾರಾಬಾದ್: ಅಪ್ಲಿಕೇಷನ್ ಆಧರಿತ ಸಾಲ ನೀಡುವ ಕಂಪನಿಗಳ ವಂಚನೆಗೆ ಸಂಬಂಧಿಸಿದಂತೆ ಹೈದರಾಬಾದ್ ಪೊಲೀಸರು ಚೀನಾ ಪ್ರಜೆ ಝು ವೀ (ಲಂಬೊ) ಎಂಬುವರನ್ನು ಬಂಧಿಸಿದ್ದಾರೆ.

ಚೀನಾದ ಜಿಯಾಂಗ್‌ಷಿ ಪ್ರಾಂತ್ಯದ ಇವರು, ಭಾರತ ತೊರೆಯುವ ಸನ್ನಾಹದಲ್ಲಿದ್ದಾಗ ದೆಹಲಿ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ. ಕಾಲ್ ಸೆಂಟರ್ ಕಾರ್ಯಾಚರಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಆಂಧ್ರಪ್ರದೇಶದ ಕರ್ನೂಲ್‌ನ ಕೆ. ನಾಗರಾಜು ಎಂಬುವರನ್ನೂ ಬಂಧಿಸಲಾಗಿದೆ.

ಸಾಲ ನೀಡುವ ನಾಲ್ಕು ಆ್ಯಪ್ ಕಂಪನಿಗಳ ಮುಖ್ಯಸ್ಥನಾಗಿ ಲಂಬೊ ಕೆಲಸ ಮಾಡುತ್ತಿದ್ದರು. ಈ ಕಂಪನಿಗಳು ಸುಮಾರು ₹21,000 ಕೋಟಿ ಮೌಲ್ಯದ ವಹಿವಾಟು ನಡೆಸಿವೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.