ADVERTISEMENT

ಕಾರ್ಗಲ್‌: ಶಂಕಿತ ಮಂಗನ ಕಾಯಿಲೆಗೆ ಮತ್ತೊಂದು ಬಲಿ

​ಪ್ರಜಾವಾಣಿ ವಾರ್ತೆ
Published 12 ಮಾರ್ಚ್ 2019, 18:16 IST
Last Updated 12 ಮಾರ್ಚ್ 2019, 18:16 IST
ಮಂಜಪ್ಪ
ಮಂಜಪ್ಪ   

ಕಾರ್ಗಲ್‌: ಶಂಕಿತ ಮಂಗನ ಕಾಯಿಲೆಯಿಂದ ಜೋಗ ಕಾರ್ಗಲ್ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಕುಳಕಾರು ಯಡ್ಡಳ್ಳಿ ನಿವಾಸಿ ಮಂಜಪ್ಪ (58) ಎಂಬುವವರು ಮಂಗಳವಾರ ಮೃತಪಟ್ಟರು.

ಐದು ದಿನಗಳ ಹಿಂದೆ ಅವರಲ್ಲಿ ಕಾಣಿಸಿಕೊಂಡ ಜ್ವರ ವಿಪರೀತಗೊಂಡ ಕಾರಣ ಸಾಗರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಬಳಿಕ ಮಣಿಪಾಲ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಜ್ವರ ಉಲ್ಬಣಗೊಂಡು ಮಣಿಪಾಲ ಆಸ್ಪತ್ರೆಯಲ್ಲಿ ಸೋಮವಾರ ಮೃತಪಟ್ಟಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT