ADVERTISEMENT

ಮುಂಗಾರು: ಉತ್ತರ, ದಕ್ಷಿಣದಲ್ಲಿ ವಾಡಿಕೆ ಮಳೆ; ಮಧ್ಯ ಭಾರತದಲ್ಲಿ ಹೆಚ್ಚು –ಐಎಂಡಿ

ಪಿಟಿಐ
Published 1 ಜೂನ್ 2021, 11:30 IST
Last Updated 1 ಜೂನ್ 2021, 11:30 IST
ಮುಂಗಾರು 
ಮುಂಗಾರು    

ನವದೆಹಲಿ: ಪ್ರಸಕ್ತ ವರ್ಷ ಉತ್ತರ ಮತ್ತು ದಕ್ಷಿಣ ಭಾರತದಲ್ಲಿ ನೈರುತ್ಯ ಮುಂಗಾರು ಮಳೆ ವಾಡಿಕೆಯಂತೆ ಬರಲಿದ್ದು, ದೇಶದ ಮಧ್ಯ ಭಾಗದಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಲಿದೆ. ಪೂರ್ವ ಮತ್ತು ಈಶಾನ್ಯ ಭಾರತದಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮಂಗಳವಾರ ಮನ್ಸೂಚನೆ ನೀಡಿದೆ.

ನೈರುತ್ಯ ಮುಂಗಾರು–2021ಕ್ಕೆ ಸಂಬಂಧಿಸಿದಂತೆ ಮುನ್ಸೂಚನೆಯ ಎರಡನೇ ಮಾಹಿತಿಯನ್ನು ಬಿಡುಗಡೆ ಮಾಡಿದ ಭಾರತ ಹವಾಮಾನ ಇಲಾಖೆಯ (ಐಎಂಡಿ) ಮಹಾ ನಿರ್ದೇಶಕ ಮೃತ್ಯುಂಜಯ ಮೊಹಾಪಾತ್ರ, ಈ ವರ್ಷ ದೇಶದಲ್ಲಿ ಮುಂಗಾರು ಮಳೆ ವಾಡಿಕೆಯಂತೆ ಸುರಿಯಲಿದೆ ಎಂದು ಹೇಳಿದರು.

ಒಟ್ಟಾರೆ ದೇಶದಲ್ಲಿ ಜೂನ್‌ನಿಂದ ಸೆಪ್ಟೆಂಬರ್‌ವರೆಗಿನ ಮುಂಗಾರು ಋತುವಿನಲ್ಲಿ ಮಳೆಯು ದೀರ್ಘಾವಧಿಯ ಸರಾಸರಿ (ಎಲ್‌ಪಿಎ) ಶೇ 101ರಷ್ಟಿರುವ ಸಾಧ್ಯತೆ ಇದೆ. ಇದರಲ್ಲಿ ಶೇ 4ರಷ್ಟು ಹೆಚ್ಚು ಅಥವಾ ಕಡಿಮೆ ಆಗಬಹುದು ಎಂದು ಅವರು ಹೇಳಿದರು.

ADVERTISEMENT

1961ರಿಂದ 2010ರ ಅವಧಿಯಲ್ಲಿ ದೇಶದಾದ್ಯಂತ ಮಳೆಯ ದೀರ್ಘಾವಧಿಯ ಸರಾಸರಿ 88 ಸೆಂ.ಮೀ.ರಷ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.