ADVERTISEMENT

ದೇಶದಲ್ಲಿ ವಾಡಿಕೆಗಿಂತ ಶೇ 6ರಷ್ಟು ಹೆಚ್ಚು ಮಳೆ

ಉತ್ತರ ಭಾರತದ ಕೆಲವೆಡೆ ಕೊರತೆ

ಪಿಟಿಐ
Published 19 ಜುಲೈ 2020, 15:05 IST
Last Updated 19 ಜುಲೈ 2020, 15:05 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ದೇಶದಲ್ಲಿ ಈ ವರೆಗೆ ವಾಡಿಕೆಗಿಂತ ಶೇ 6ರಷ್ಟು ಅಧಿಕ ಮಳೆ ಬಿದ್ದಿದೆ. ಆದರೂ, ಉತ್ತರ ಭಾರತದ ಕೆಲವು ಪ್ರದೇಶಗಳಲ್ಲಿ ಮಳೆ ಕೊರತೆ ಕಂಡು ಬಂದಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಭಾನುವಾರ ಹೇಳಿದೆ.

ದೇಶದ ದಕ್ಷಿಣ ಭಾಗ, ಕೇಂದ್ರ, ಪೂರ್ವ ಹಾಗೂ ಈಶಾನ್ಯ ಭಾಗದಲ್ಲಿ ವಾಡಿಕೆಗಿಂತ ಹೆಚ್ಚು ಮಳೆ ಬಿದ್ದಿದೆ. ದೇಶದ ವಾಯವ್ಯ ಭಾಗದಲ್ಲಿ ವಾಡಿಕೆಗಿಂತ ಶೇ 19ರಷ್ಟು ಮಳೆ ಬಿದ್ದಿದೆ. ಜಮ್ಮು–ಕಾಶ್ಮೀರ, ಲಡಾಖ್‌, ಉತ್ತರಾಖಂಡ್‌, ಹಿಮಾಚಲ ಪ್ರದೇಶ, ಉತ್ತರ ಪ್ರದೇಶ, ಹರಿಯಾಣ, ಪಂಜಾಬ್‌, ದೆಹಲಿ ಹಾಗೂ ರಾಜಸ್ಥಾನದಲ್ಲಿ ಈ ಕೊರತೆ ದಾಖಲಾಗಿದೆ ಎಂದು ಇಲಾಖೆ ತಿಳಿಸಿದೆ.

ಈ ಪ್ರದೇಶಗಳ ಪೈಕಿ, ಭಾನುವಾರದವರೆಗೆ ದಾಖಲಾದ ಅಂಕಿ–ಅಂಶಗಳ ಪ್ರಕಾರ, ಹಿಮಾಚಲ ಪ್ರದೇಶ, ರಾಜಸ್ಥಾನ, ಜಮ್ಮು–ಕಾಶ್ಮೀರ, ಲಡಾಖ್‌ನಲ್ಲಿ ಅತಿ ಹೆಚ್ಚಿನ ಪ್ರಮಾಣದ ಕೊರತೆ ಕಂಡು ಬಂದಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.