ADVERTISEMENT

ಪಾಕ್‌ನಿಂದ ಬಿಡುಗಡೆಗೊಂಡಿದ್ದ ಯೋಧನಿಗೆ ತವರಿನಲ್ಲಿ ಅದ್ದೂರಿ ಸ್ವಾಗತ

​ಪ್ರಜಾವಾಣಿ ವಾರ್ತೆ
Published 23 ಮೇ 2025, 15:46 IST
Last Updated 23 ಮೇ 2025, 15:46 IST
ಪೂರ್ಣಂ ಸಾಹು
ಪೂರ್ಣಂ ಸಾಹು   

ಕೋಲ್ಕತ್ತ: ಪಾಕಿಸ್ತಾನ‌ ವಶದಿಂದ ಬಿಡುಗಡೆಗೊಂಡಿದ್ದ ಬಿಎಸ್‌ಎಫ್‌ ಯೋಧ ಪೂರ್ಣಂ ಕುಮಾರ್‌ ಸಾಹು ಅವರು ತಮ್ಮ ಊರಾದ ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಗೆ ಶುಕ್ರವಾರ ಸಂಜೆ ಮರಳಿದ್ದಾರೆ.

ಮುಂಜಾನೆ ಹೌರಾ ನಿಲ್ದಾಣಕ್ಕೆ ತಲುಪಿದ ಪೂರ್ಣಂ ಅವರನ್ನು ಕುಟುಂಬಸ್ಥರು ಮತ್ತು ಸ್ನೇಹಿತರು, ‘ಭಾರತ್‌ ಮಾತಾ ಕೀ ಜೈ’ ಮತ್ತು ‘ವಂದೇ ಮಾತರಂ’ ಘೋಷಣೆಗಳೊಂದಿಗೆ ಅದ್ಧೂರಿಯಾಗಿ ಸ್ವಾಗತಿಸಿದರು. ಸಾಹು ಅವರನ್ನು ಕಂಡು ಕುಟುಂಬಸ್ಥರು ಭಾವುಕರಾದರು.

ಪೂರ್ಣಂ ಅವರನ್ನು ಅಭಿನಂದಿಸಲು ನೂರಾರು ಜನ ಆಗಮಿಸಿದ್ದರು. ಪೊಲೀಸ್‌ ಭದ್ರತೆಯೊಂದಿಗೆ ಸಾಹು ಅವರನ್ನು ತವರೂರು ರಿಶ್ರಾಗೆ ಕರೆದುಕೊಂಡು ಹೋಗಲಾಯಿತು. 

ADVERTISEMENT

ಪಂಜಾಬ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ‍ಪೂರ್ಣಂ ಅವರು ಏ.24ರಂದು ಆಕಸ್ಮಿಕವಾಗಿ ಪಾಕಿಸ್ತಾನ ಗಡಿಯೊಳಗೆ ಪ್ರವೇಶಿಸಿದ್ದರು. ಅವರನ್ನು ಬಂಧಿಸಿದ್ದ ಪಾಕ್‌ ರೇಂಜರ್‌ಗಳು ಮೂರು ವಾರಗಳ ಬಳಿಕ ಮೇ 14ರಂದು ಭಾರತಕ್ಕೆ ಹಸ್ತಾಂತರಿಸಿದ್ದರು. ಸೇನಾ ಪ್ರಕ್ರಿಯೆಗಳೆಲ್ಲ ಪೂರ್ಣಗೊಂಡ ಬಳಿಕ ಸಾಹು ಮನೆಗೆ ಮರಳಿದ್ದಾರೆ.

ಕೋಲ್ಕತ್ತದ ಹೌರಾ ರೈಲು ನಿಲ್ದಾಣಕ್ಕೆ ಆಗಮಿಸಿದ್ದ ಪೂರ್ಣಂ ಸಾಹು – ಪಿಟಿಐ ಚಿತ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.