ADVERTISEMENT

ವಡೋದರ: ಕೆಮಿಕಲ್ ಕಾರ್ಖಾನೆಯಲ್ಲಿ ಬಾಯ್ಲರ್ ಸ್ಫೋಟ– ನಾಲ್ವರ ಸಾವು

ಪಿಟಿಐ
Published 24 ಡಿಸೆಂಬರ್ 2021, 13:47 IST
Last Updated 24 ಡಿಸೆಂಬರ್ 2021, 13:47 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ವಡೋದರ: ಗುಜರಾತ್‌ನ ವಡೋದರದ ಕೆಮಿಕಲ್ ಕಾರ್ಖಾನೆಯಲ್ಲಿ ಸಂಭವಿಸಿದ ಬಾಯ್ಲರ್ ಸ್ಫೋಟದಲ್ಲಿ 4 ವರ್ಷದ ಬಾಲಕಿ ಸೇರಿ ನಾಲ್ವರು ಮೃತಪಟ್ಟಿದ್ದು, 11 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ಧಾರೆ.

65 ವರ್ಷದ ವ್ಯಕ್ತಿ, ಓರ್ವ ಯುವತಿ ಮತ್ತು 30 ವರ್ಷದ ಮಹಿಳೆ ಮೃತಪಟ್ಟ ಇತರೆ ಮೂವರು ಎಂದು ಅವರು ತಿಳಿಸಿದ್ದಾರೆ.

‘ಬೆಳಗ್ಗೆ 9.30ರ ಸುಮಾರಿಗೆ ಬಲವಾದ ಸ್ಫೋಟ ಸಂಭವಿಸಿದ್ದು, 15 ಮಂದಿ ಗಾಯಗೊಂಡಿದ್ದರು. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರಲ್ಲಿ 4 ಜನರು ಮೃತಪಟ್ಟಿದ್ದಾರೆ. ಕೆಲವರು ಕರೆತರುವಾಗಲೇ ಮಾರ್ಗಮಧ್ಯೆ ಮೃತಪಟ್ಟರೆ, ಮತ್ತೆ ಕೆಲವರು ಚಿಕಿತ್ಸೆ ವೇಳೆ ಅಸುನೀಗಿದ್ದಾರೆ’ ಎಂದು ಮಕರ್‌ ಪುರ ಪೊಲೀಸ್‌ ಠಾಣೆಯ ಇನ್ಸ್‌ಪೆಕ್ಟರ್ ಸಜಿದ್ ಬಲೋಚ್ ತಿಳಿಸಿದ್ದಾರೆ.

ADVERTISEMENT

ಮೃತರಲ್ಲಿ ಕಾರ್ಮಿಕರು, ದಾರಿಹೋಕರು ಸೇರಿದ್ದಾರೆ ಎಂದು ಅವರು ತಿಳಿಸಿದ್ದಾರೆ.

‘ನಾಲ್ವರಲ್ಲಿ ಕೆಲವರು ಸುಟ್ಟ ಗಾಯಗಳಿಂದ ಮೃತಪಟ್ಟಿದ್ದರೆ, ಮತ್ತೆ ಕೆಲವರು ಹಾರಿಬಂದ ವಸ್ತುಗಳು ಬಡಿದು ಸಾವಿಗೀಡಾಗಿದ್ದಾರೆ. ಸ್ಥಳಕ್ಕೆ ಆಗಮಿಸಿದ ವಿಧಿ ವಿಜ್ಞಾನ ತಜ್ಞರ ತಂಡ ಪರಿಶೀಲನೆ ನಡೆಸುತ್ತಿದೆ’ ಎಂದು ಬಲೋಚ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.