ADVERTISEMENT

ದಂಡದ ಗೊಂದಲಕ್ಕೆ ಸ್ಪಷ್ಟೀಕರಣ

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2019, 20:00 IST
Last Updated 13 ಸೆಪ್ಟೆಂಬರ್ 2019, 20:00 IST
   

ನವದೆಹಲಿ: ಮೋಟಾರು ವಾಹನ ಕಾಯ್ದೆಗೆ ತಿದ್ದುಪಡಿ ತಂದು ದಂಡದ ಪ್ರಮಾಣ ಹೆಚ್ಚಿಸುವುದರ ಜತೆಗೆ ಇತರ ಕೆಲವು ನಿಯಮ ಗಳಲ್ಲಿಯೂ ಬದಲಾವಣೆಗಳನ್ನು ಮಾಡಲಾಗಿದೆ. ತಿದ್ದುಪಡಿ ಕಾಯ್ದೆಯ ಬಗ್ಗೆ ಜನರಲ್ಲಿ ಭಾರಿ ಗೊಂದಲ ಮನೆ ಮಾಡಿದೆ. ಹಾಗಾಗಿ, ಕೇಂದ್ರ ರಸ್ತೆ ಸಾರಿಗೆ ಸಚಿವಾಲಯವು ಕೆಲ ವಿಚಾರಗಳಲ್ಲಿ ಸ್ಪಷ್ಟೀಕರಣ ನೀಡಿದೆ.

ಸಂಚಾರ ನಿಯಮ ಉಲ್ಲಂಘನೆಗಳನ್ನು ಎರಡು ವಿಭಾಗಗಳಾಗಿ ವಿಂಗಡಿಸಲಾಗಿದೆ. ಪೊಲೀಸರು ಅಥವಾ ಕಾನೂನು ಜಾರಿ ಅಧಿಕಾರಿಗಳ ಬಳಿಯಲ್ಲಿಯೇ ದಂಡ ಕಟ್ಟಬಹುದಾದ ಉಲ್ಲಂಘನೆಗಳು ಮತ್ತು ನ್ಯಾಯಾಲಯಕ್ಕೆ ಹಾಜರಾಗಿಯೇ ದಂಡ ಕಟ್ಟಬೇಕಾದ ಉಲ್ಲಂಘನೆಗಳು ಎಂಬುದೇ ಆ ಎರಡು ವಿಭಾಗಗಳು.

ಯಾವ ಉಲ್ಲಂಘನೆ ಯಾವ ವಿಭಾಗದ ಅಡಿಯಲ್ಲಿ ಸೇರಿದೆ ಎಂಬ ವಿಚಾರದಲ್ಲಿ ಸಂಚಾರ ಪೊಲೀಸರಲ್ಲಿಯೂ ಗೊಂದಲ ಇದೆ.

ADVERTISEMENT

ಅದಕ್ಕಾಗಿಯೇ ಸಚಿವಾಲಯ ಯಾವ ವಿಭಾಗದಲ್ಲಿ ಯಾವ ಉಲ್ಲಂಘನೆಗಳು ಬರುತ್ತಿವೆ ಎಂಬ ವಿವರವನ್ನು ಪ್ರಕಟಿಸಿದೆ.

ನ್ಯಾಯಾಲಯದಲ್ಲಿಯೇ ದಂಡ ಕಟ್ಟಬೇಕಾದ ಉಲ್ಲಂಘನೆ

lಸಂಚಾರ ನಿಯಮ ಉಲ್ಲಂಘನೆ

lದೋಷಪೂರಿತ ವಾಹನ

lಮದ್ಯಪಾನ ಮಾಡಿ ವಾಹನ ಚಾಲನೆ

lಅಪಘಾತಕ್ಕೆ ಕಾರಣವಾದ ಅಪರಾಧಗಳು

lದೋಷಪೂರಿತ ವಾಹನದ ಅಸುರಕ್ಷಿತ ಚಾಲನೆ

lಮನುಷ್ಯ ಜೀವಕ್ಕೆ ಅಪಾಯಕಾರಿಯಾಗಿ ಸರಕು ಸಾಗಾಟ

lಕಾಯ್ದೆಗೆ ವ್ಯತಿರಿಕ್ತವಾಗಿ ವಾಹನ ಮಾರಾಟ ಅಥವಾ ವಾಹನಗಳ ಮಾರ್ಪಡಿಸುವಿಕೆ

lಏಜೆಂಟರು ಮತ್ತು ದಲ್ಲಾಳಿಗಳಿಗೆ ವಿಧಿಸಲಾದ ದಂಡ

lಕಾನೂನುಬದ್ಧ ಅಧಿಕಾರ ಇಲ್ಲದೆ ವಾಹನ ಒಯ್ಯುವುದು

lಬಲವಂತವಾಗಿ ವಾಹನದ ಜಪ್ತಿ

lರಸ್ತೆ ವಿನ್ಯಾಸ ಮಾನದಂಡ ಪಾಲಿಸದಿರುವುದು (ರಸ್ತೆ ನಿರ್ಮಾಣ ಗುತ್ತಿಗೆದಾರರಿಗೆ)

l18 ವರ್ಷದೊಳಗಿನವರಿಂದಾದಅಪರಾಧ

lಸುಗಮ ಸಂಚಾರಕ್ಕೆ ಅಡ್ಡಿ

lಕಾನೂನು ಜಾರಿ ಮಾಡುವವರಿಂದಾದ ಅಪರಾಧಗಳು

ಸ್ಥಳದಲ್ಲಿಯೇ ದಂಡ ಪಾವತಿಸಬಹುದಾದ ಅಪರಾಧಗಳು

ಟಿಕೆಟ್‌ರಹಿತ ಪ್ರಯಾಣ, ಅಧಿಕಾರಿಗಳ ಆದೇಶ ಪಾಲಿಸದಿರುವುದು ಮತ್ತು ಮಾಹಿತಿ ನೀಡಲು ನಿರಾಕರಣೆ, ಪರವಾನಗಿ ಇಲ್ಲದೆ ವಾಹನದ ಅನಧಿಕೃತ ಬಳಕೆ, ಪರವಾನಗಿ ಇಲ್ಲದೆ ವಾಹನ ಚಾಲನೆ, ಚಾಲನೆಯ ಅರ್ಹತೆ ಇಲ್ಲದಿದ್ದರೂ ಚಾಲನೆ, ರಸ್ತೆ ನಿರ್ಮಾಣಕ್ಕೆ ಸಂಬಂಧಿಸಿದ ದಂಡಗಳು, ವಾಹನ ಮತ್ತು ಬಿಡಿಭಾಗಗಳ ಮಾರಾಟ ಮತ್ತು ಪರಿವರ್ತನೆಯಲ್ಲಿ ನಿಯಮ ಉಲ್ಲಂಘನೆಗೆ ಸಂಬಂಧಿಸಿದ ದಂಡಗಳು, ಸುರಕ್ಷತಾ ಸಲಕರಣೆಗಳ ಮಾರಾಟದಲ್ಲಿ ನಿಯಮ ಉಲ್ಲಂಘನೆ, ನಿಯಮ ಉಲ್ಲಂಘಿಸಿ ವಾಹನದ ಪರಿವರ್ತನೆ, ಮಾನಸಿಕವಾಗಿ ಅಥವಾ ದೈಹಿಕವಾಗಿ ವಾಹನ ಚಲಾಯಿಸುವ ಸ್ಥಿತಿಯಲ್ಲಿ ಇಲ್ಲದಿದ್ದಾಗ ವಾಹನ ಚಾಲನೆ, ಅತಿವೇಗ, ಅಪಾಯಕಾರಿ ಚಾಲನೆ, ಅತಿಗಾತ್ರದ ವಾಹನ, ರಸ್ತೆ ಸುರಕ್ಷತೆ ನಿಯಮ ಮೀರಿ ವಾಹನ ಚಾಲನೆ, ಸದ್ದು–ವಾಯು ಮಾಲಿನ್ಯ, ಪರವಾನಗಿರಹಿತ ವಾಹನ ಚಾಲನೆ, ಮಿತಿಗಿಂತ ಹೆಚ್ಚಿನ ಜನರು ಅಥವಾ ಸರಕು ಸಾಗಾಟ, ವಾಹನದ ಹಿಂದೆ ಅಥವಾ ಮುಂದೆ ವಿಸ್ತರಣೆ, ಸೀಟ್‌ ಬೆಲ್ಟ್‌ ಮತ್ತು ಮಕ್ಕಳನ್ನು ಕುಳ್ಳಿರಿಸುವ ನಿಯಮ ಉಲ್ಲಂಘನೆ, ದ್ವಿಚಕ್ರ ವಾಹನ ಸವಾರರು ಮತ್ತು ಹಿಂಬದಿ ಸವಾರರ ಸುರಕ್ಷತೆ ನಿಯಮ ಉಲ್ಲಂಘನೆ, ಹೆಲ್ಮೆಟ್‌ರಹಿತ ಚಾಲನೆ, ತುರ್ತು ವಾಹನಗಳಿಗೆ ದಾರಿ ಬಿಟ್ಟುಕೊಡದಿರುವುದು, ವಿಮೆರಹಿತ
ವಾಹನ ಚಾಲನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.