ADVERTISEMENT

ಮೋಟಾರು ವಾಹನ ಕಾಯ್ದೆ ಜಾರಿ; ಮೊದಲ ದಿನ ದೆಹಲಿಯಲ್ಲಿ 3900 ಜನರಿಗೆ ದಂಡ

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2019, 8:51 IST
Last Updated 2 ಸೆಪ್ಟೆಂಬರ್ 2019, 8:51 IST
   

ನವದೆಹಲಿ:ಮೋಟಾರು ವಾಹನ ಕಾಯ್ದೆ ಜಾರಿಯಾದ ಮೊದಲ ದಿನವೇ (ಸೆಪ್ಟೆಂಬರ್‌ 01) ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸಂಚಾರ ನಿಯಮ ಉಲ್ಲಂಘಿಸಿದ 3900 ಜನರಿಗೆಸಂಚಾರಿ ಪೊಲೀಸರು ದಂಡ ವಿಧಿಸಿದ್ದಾರೆ.

‌ಹೆಲ್ಮೆಟ್‌ ಇಲ್ಲದೆ ಬೈಕ್ ಚಾಲನೆ, ತುರ್ತು ವಾಹನಗಳಿಗೆ ತಡೆ, ಅತಿ ವೇಗ, ಸಿಗ್ನಲ್‌ ಜಂಪ್‌, ವ್ಹೀಲಿಂಗ್‌ ಮಾಡಿದ ಆರೋಪ ಸೇರಿದಂತೆ ವಿವಿಧ ಪ್ರಕರಣಗಳ ಅಡಿಯಲ್ಲಿ ದಂಡ ವಿಧಿಸಲಾಗಿದೆ. ಭಾನುವಾರ ಸಂಜೆ 7ರ ವೇಳೆಗೆ ಸುಮಾರು 3,900 ಜನರಿಗೆ ದಂಡ ವಿಧಿಸಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

‘ನಿಕರವಾದ ಅಂಕಿ–ಅಂಶಗಳು ಇನ್ನೂ ಲಭ್ಯವಾಗಿಲ್ಲ. ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳ ಸ್ಪಷ್ಟ ಮಾಹಿತಿ ಇಂದು(ಸೋಮವಾರ) ದೊರೆಯುತ್ತದೆ’ ಎಂದು ಸಂಚಾರಿ ಪೊಲೀಸ್‌ ಆಯಕ್ತ ನರೇಂದ್ರ ಸಿಂಗ್‌ ಬುಂಡೇಲಾ ಹೇಳಿದ್ಧಾರೆ.

ADVERTISEMENT

2018ರಲ್ಲಿ ಒಟ್ಟು 67,04,560 ದಂಡ ವಿಧಿಸಿದ ಅಂಕಿ ಅಂಶವಿದೆ. ಅದರಂತೆ ಪ್ರತಿದಿನ ಸರಾಸರಿ 19,000 ಜನರಿಗೆ ದಂಡ ಹಾಕಿದ ಅಂದಾಜಿಸಲಾಗಿದೆ. 2017ರಲ್ಲಿ ಒಟ್ಟು 62,87,486 ಜನರಿಗೆ ದಂಡ ಹಾಕಲಾಗಿತ್ತು ಎಂದು ಹಿಂದೂಸ್ತಾನ್‌ ಟೈಮ್ಸ್‌ ವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.