ADVERTISEMENT

ಬಿಜೆಪಿ ಶುರುಮಾಡಿದೆ #5 ವರ್ಷದ ಸವಾಲು

​ಪ್ರಜಾವಾಣಿ ವಾರ್ತೆ
Published 18 ಜನವರಿ 2019, 12:50 IST
Last Updated 18 ಜನವರಿ 2019, 12:50 IST
   

ಬೆಂಗಳೂರು: ಹಳೆಯ ನೆನಪುಗಳನ್ನು ಮೆಲುಕು ಹಾಕುವ ‘#10 ವರ್ಷದ ಚಾಲೆಂಜ್‌’ ಈಗಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್‌ಆಗಿದೆ. ಈ ಸವಾಲು ಸ್ವೀಕರಿಸಿದವರೆಲ್ಲ 10 ವರ್ಷಗಳ ಹಿಂದಿನ ತಮ್ಮ ಫೋಟೊವನ್ನು ಈಗಿನದರ ಜೊತೆ ಹೋಲಿಸಿ ಪ್ರಕಟಿಸಿಕೊಳ್ಳುತ್ತಿದ್ದಾರೆ.

ಇದೇ ರೀತಿ ಬಿಜೆಯೂ ಈ ಸವಾಲು ಸ್ವೀಕರಿಸಿದ್ದು, ತನ್ನದೆಯಾದ ಹೊಸ ಹ್ಯಾಷ್‌ಟ್ಯಾಗ್‌ (#5 ವರ್ಷದ ಸವಾಲು) ರೂಪಿಸಿಕೊಂಡಿದೆ. ಇದರಡಿ 2009 ರಿಂದ 2014ರವರೆಗೆ ಅಧಿಕಾರದಲ್ಲಿದ್ದ ಯುಪಿಎ ಸರ್ಕಾರ ಮಾಡಿದ ಕೆಲಸಗಳೊಂದಿಗೆ ತನ್ನ ಕೆಲಸಗಳನ್ನು ಹೋಲಿಸಿಕೊಂಡು ಚಿತ್ರಗಳನ್ನು ಹಂಚಿಕೊಂಡಿದೆ.

ಈ #5 ವರ್ಷದ ಸವಾಲಿನಲ್ಲಿ ಕಾಣುವ ಪ್ರಮುಖ ಅಂಶಗಳೆಂದರೆ ಕುಂಭಮೇಳಕ್ಕೆ ನೀಡುವ ಅನುದಾನ ಸಾಕಷ್ಟು ಹೆಚ್ಚಾಗಿರುವುದು, ಬೋಗಿಬೀಲ್‌ ಸೇತುವೆ ಪೂರ್ಣಗೊಂಡಿರುವುದು, ಆಯುಷ್ಮಾನ್‌ ಭಾರತ ಯೋಜನೆಯಿಂದ ಭಾರತದಲ್ಲಿ ಹೂಡಿಕೆ ಹೆಚ್ಚಾಗಿರುವುದು.. ಹೀಗೆ ಸಾಕಷ್ಟು ಅಂಶಗಳ ಬಗ್ಗೆ ಬಿಜೆಪಿ ಪ್ರಸ್ತಾಪಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.