ಜಿತು ಪಟ್ವಾರಿ
ಭೋಪಾಲ್: ಮಧ್ಯಪ್ರದೇಶದ ಅಶೋಕ್ ನಗರ ಜಿಲ್ಲೆಯಲ್ಲಿ ನಡೆದ ಹಲ್ಲೆಯ ಸಂದರ್ಭದಲ್ಲಿ ಮಲ ತಿನ್ನಿಸಲಾಗಿದೆ ಎಂದು ಸುಳ್ಳು ಹೇಳಿಕೆ ನೀಡುವಂತೆ ಯುವಕನೊಬ್ಬನನ್ನು ಒತ್ತಾಯಿಸುವ ಮೂಲಕ ದ್ವೇಷವನ್ನು ಹರಡಲಾಗುತ್ತಿದೆ ಎಂಬ ಆರೋಪದಡಿ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಜಿತು ಪಟ್ವಾರಿ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.
ಯುವಕನೊಬ್ಬ ನೀಡಿದ ದೂರಿನ ಆಧಾರದ ಮೇಲೆ ಪಟ್ವಾರಿ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಎಫ್‌ಐಆರ್ ಸಂಬಂಧ ಪ್ರತಿಕ್ರಿಯಿಸಿರುವ ಪಟ್ವಾರಿ, 'ಆಡಳಿತ ಶಕ್ತಿಗಳ ಸರ್ವಾಧಿಕಾರವು ಧ್ವನಿಯನ್ನು ಹತ್ತಿಕ್ಕುವ ಪ್ರಯತ್ನವನ್ನು ಬಹಿರಂಗಪಡಿಸಿದೆ' ಎಂದು ಪಟ್ವಾರಿ ಹೇಳಿದ್ದಾರೆ.
'ಪಡಿತರ ಚೀಟಿಗೆ ಸಂಬಂಧಿಸಿದ ವಿವಾದದಲ್ಲಿ ಗ್ರಾಮವೊಂದರ ಸರಪಂಚ್‌ನ ಪತಿ ಮತ್ತು ಮಗ ನನಗೆ ಹೊಡೆದು ಮಲ ಉಣಿಸಿದ್ದಾರೆ ಎಂದು ಯುವಕನೊಬ್ಬ ಈ ಹಿಂದೆ ನನ್ನ ಬಳಿ ಆರೋಪಿಸಿದ್ದ. ಆದರೆ ಪೊಲೀಸರು ಕ್ರಮ ಕೈಗೊಂಡಿಲ್ಲ ಎಂದೂ ಹೇಳಿಕೊಂಡಿದ್ದನು. ಈ ಸಂಬಂಧ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗೆ ಕರೆ ಮಾಡಿ ತಿಳಿಸಿದ್ದ ವಿಡಿಯೊವನ್ನು ಪಟ್ಟಾರಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.
ಆದರೆ, ಎರಡು ದಿನದ ಬಳಿಕ ಹಲ್ಲೆ ವೇಳೆ ಥಳಿಸಿದ್ದು ನಿಜ ಆದರೆ ಮಲ ತಿನ್ನಿಸಿಲ್ಲ. ಪಟ್ವಾರಿ ಸುಳ್ಳು ಹೇಳಿಕೆ ನೀಡುವಂತೆ ಒತ್ತಾಯಿಸಿದ್ದಾರೆ ಎಂದು ಸಂತ್ರಸ್ತ ಯುವಕ ಎಫ್‌ಐಆರ್‌ನಲ್ಲಿ ಉಲ್ಲೇಖಿಸಿರುವುದಾಗಿ ಪೊಲೀಸರು ಹೇಳಿದ್ದಾರೆ.
ಪಟ್ವಾರಿ ಆರೋಪಗಳನ್ನು ತಳ್ಳಿಹಾಕಿದ್ದು, ಆಡಳಿತ ಪಕ್ಷದಿಂದ ಧ್ವನಿ ಅನ್ನು ಹತ್ತಿಕ್ಕುವ ಕೆಲಸ ನಡಿಯುತ್ತಿದೆ. ಈ ವಿಷಯವು ಕೇವಲ ಒಂದು ಎಫ್‌ಐಆರ್‌ಗೆ ಸೀಮಿತವಾಗಿಲ್ಲ , ಬದಲಾಗಿ ಆಡಳಿತ ಪಕ್ಷದ ಒತ್ತಡ ಮತ್ತು ಪಿತೂರಿಯ ಭಾಗವಾಗಿದೆ. ವಿರೋಧ ಪಕ್ಷದ ನಾಯಕರ ಮಾನಹಾನಿ ಮಾಡಲು ಮತ್ತು ಸತ್ಯವನ್ನು ಮರೆಮಾಚಲು ಸಂಚು ರೂಪಿಸಲಾಗುತ್ತಿದೆ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.