ADVERTISEMENT

ಆಸ್ಪತ್ರೆ ಬಿಲ್ ನೋಡಿ ಆಘಾತ: 'ಕೋಮಾ'ದಿಂದೆದ್ದು ಐಸಿಯುನಿಂದ ಓಡಿ ಬಂದ ವ್ಯಕ್ತಿ!

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 8 ಮಾರ್ಚ್ 2025, 6:27 IST
Last Updated 8 ಮಾರ್ಚ್ 2025, 6:27 IST
   

ಭೋಪಾಲ್‌: ಖಾಸಗಿ ಆಸ್ಪತ್ರೆಯ ಬಿಲ್‌ ನೋಡಿ, ಕೋಮಾದಲ್ಲಿರುವ ವ್ಯಕ್ತಿಯೊಬ್ಬರು ಐಸಿಯುನಿಂದ ಆಮ್ಲಜನಕ ಮಾಸ್ಕ್‌ ಸಮೇತ ಆಸ್ಪತ್ರೆಯಿಂದ ಹೊರಗೆ ಬಂದು ಪ್ರತಿಭಟನೆ ನಡೆಸಿರುವ ಘಟನೆ ನಡೆದಿದೆ.

ಇದರ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಈ ಘಟನೆ ಮಧ್ಯಪ್ರದೇಶದ ರತ್ಲಂನಲ್ಲಿ ನಡೆದಿದೆ.

ಘಟನೆ ವಿವರ...

ADVERTISEMENT

ದೀನದಯಾಳ್‌ ನಗರದ ನಿವಾಸಿಯಾಗಿರುವ ನಾನು (ಬಂಟಿ) ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದೆ. ಈ ವೇಳೆ ನನ್ನ ತಪಾಸಣೆ ಮಾಡಿದ ವೈದ್ಯರು ಐಸಿಯುಗೆ ದಾಖಲು ಮಾಡಿದ್ದರು. ನಂತರ ಬೆನ್ನು ಮೂಳೆ ಮುರಿದು ಹೋದ ಪರಿಣಾಮ ನಾನು ಕೋಮಾಗೆ ಜಾರಿದ್ದು, ತಕ್ಷಣ ದುಬಾರಿ ಚಿಕಿತ್ಸೆಯ ಅಗತ್ಯವಿದೆ, ಆದಷ್ಟು ಬೇಗ ಹಣ ಹೊಂದಿಸಿ ಎಂದು ನನ್ನ ಕುಟುಂಬಕ್ಕೆ ವೈದ್ಯರು ತಿಳಿಸಿದ್ದರು. ನಮ್ಮ ಕುಟುಂಬದವರು ₹ 1ಲಕ್ಷ ಹೊಂದಿಸಿ ಆಸ್ಪತ್ರೆಗೆ ಕಟ್ಟಿದ್ದಾರೆ ಎಂದು ಆ ವ್ಯಕ್ತಿ ಹೇಳಿದ್ದಾರೆ.

ನಾನು ಕೋಮಾಗೆ ಹೋಗಿರಲಿಲ್ಲ. ಸಣ್ಣ ಪುಟ್ಟ ಗಾಯಗಳಾಗಿದ್ದವು. ಇದನ್ನು ನೆಪ ಮಾಡಿಕೊಂಡು ನಮ್ಮ ಬಳಿ ಹಣ ಸುಲಿಗೆ ಮಾಡಲು ಆಸ್ಪತ್ರೆಗಳು ಇಂತಹ ಕೆಟ್ಟ ಕೆಲಸ ಮಾಡುತ್ತಿವೆ ಎಂದು ಬಂಟಿ ಆ ವಿಡಿಯೊದಲ್ಲಿ ಆರೋಪಿಸಿದ್ದಾರೆ.

ಈ ವಿಷಯ ಗೊತ್ತಾಗಿಯೇ ನಾನು ಐಸಿಯುನಿಂದ ತಪ್ಪಿಸಿಕೊಂಡು ಬಂದೆ. ಮತ್ತು ಆಸ್ಪತ್ರೆಯ ಆವರಣದಲ್ಲಿ ಜನರನ್ನು ಒಟ್ಟುಗೂಡಿಸಿ ಆಸ್ಪತ್ರೆಗಳು ಹೇಗೆಲ್ಲಾ ಜನರಿಗೆ ಮೋಸ ಮಾಡುತ್ತವೆ ಎಂಬುದನ್ನು ತಿಳಿಸುವುದು ನನ್ನ ಉದ್ದೇಶವಾಗಿತ್ತು ಎಂದು ಬಂಟಿ ಹೇಳಿದ್ದಾರೆ.

ಈ ಕುರಿತು ವಿಡಿಯೊವನ್ನು Amit ಎಂಬ ಹೆಸರಿನ ಎಕ್ಸ್‌ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಈ ವಿಡಿಯೊ ಲಕ್ಷಾಂತರ ವೀಕ್ಷಣೆ ಕಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.