ADVERTISEMENT

ಶ್ರಮಿಕ ರೈಲಿನಲ್ಲಿ ಹೃದಯಾಘಾತ: ಇಬ್ಬರು ಸಾವು

ಪಿಟಿಐ
Published 12 ಮೇ 2020, 19:30 IST
Last Updated 12 ಮೇ 2020, 19:30 IST
ಶ್ರಮಿಕ್‌ ರೈಲು ಏರಲು ಹೊರಟ ವಲಸೆ ಕಾರ್ಮಿಕರ ಸಂಗ್ರಹ ಚಿತ್ರ
ಶ್ರಮಿಕ್‌ ರೈಲು ಏರಲು ಹೊರಟ ವಲಸೆ ಕಾರ್ಮಿಕರ ಸಂಗ್ರಹ ಚಿತ್ರ   

ಸತ್ನಾ/ಬೇತುಲ್: ಶ್ರಮಿಕ ವಿಶೇಷ ರೈಲಿನಲ್ಲಿ ತಮ್ಮೂರಿಗೆ ಮರಳುತ್ತಿದ್ದ ಇಬ್ಬರು ವಲಸೆ ಕಾರ್ಮಿಕರು ಹೃದಯಾಘಾತದಿಂದ ಸಾವನ್ನಪ್ಪಿದ್ದ ಎರಡು ಪ್ರತ್ಯೇಕ ಘಟನೆಗಳು ಮಧ್ಯಪ್ರದೇಶದಲ್ಲಿ ನಡೆದಿವೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.

ಮೃತಪಟ್ಟ ಕಾರ್ಮಿಕರಲ್ಲಿ ಒಬ್ಬರು ಉತ್ತರ ಪ್ರದೇಶದ ಗೊಂಡಾ ಜಿಲ್ಲೆಗೆ ಮತ್ತೊಬ್ಬರು ಬಿಹಾರದ ಔರಂಗಾಬಾದ್ ಜಿಲ್ಲೆಗೆ ಮರಳುತ್ತಿದ್ದರು ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಪುಣೆಯ ಹೋಟೆಲೊಂದರಲ್ಲಿ ಕೆಲಸ ಮಾಡುತ್ತಿದ್ದ ಅಖಿಲೇಶ್ ಕುಮಾರ್ ರಾಣಾ ಅವರು ಸೋಮವಾರ ಶ್ರಮಿಕ ರೈಲಿನಲ್ಲಿಗೊಂಡಾ ಜಿಲ್ಲೆಗೆ ಮರಳುವಾಗ ಅನಾರೋಗ್ಯಪೀಡಿತರಾದರು. ಸತ್ನಾ ಜಿಲ್ಲೆಯ ಮಜ್ಗಾವಾ ರೈಲ್ವೆ ನಿಲ್ದಾಣದಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಿದಾಗ ಅವರು ಹೃದಯಘಾತದಿಂದ ಸಾವನ್ನಪ್ಪಿದ್ದಾರೆ ಎಂದು ವೈದ್ಯರು ತಿಳಿಸಿದರು ಎಂದು ಪೊಲೀಸರು ಹೇಳಿದ್ದಾರೆ.

ADVERTISEMENT

ಮತ್ತೊಂದು ಘಟನೆಯಲ್ಲಿ ತಮಿಳುನಾಡಿನಿಂದ ಬಿಹಾರದ ಔರಂಗಾಬಾದ್‌ ಜಿಲ್ಲೆಗೆ ಪ್ರಯಾಣಿಸುತ್ತಿದ್ದ ಕಾರ್ಮಿಕ ನಂದಕುಮಾರ್ ಪಾಂಡೆಅವರಿಗೆ ಭಾನುವಾರ ರಾತ್ರಿ ರೈಲಿನಲ್ಲಿ ಹೃದಯಾಘಾತವಾಗಿತ್ತು. ಆಮ್ಲಾ ರೈಲ್ವೆ ನಿಲ್ದಾಣದಲ್ಲಿ ಪರೀಕ್ಷಿಸಿದಾಗನಂದಕುಮಾರ್ ಸಾವನ್ನಪ್ಪಿರುವುದಾಗಿ ವೈದ್ಯರು ತಿಳಿಸಿದರು ಎಂದು ಆಮ್ಲಾ ತಹಶೀಲ್ದಾರ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.