ADVERTISEMENT

ಪ್ರಣವ್ ಅಗಲಿಕೆಗೆ ಬೈಡನ್ ಸಂತಾಪ

ಪಿಟಿಐ
Published 1 ಸೆಪ್ಟೆಂಬರ್ 2020, 8:54 IST
Last Updated 1 ಸೆಪ್ಟೆಂಬರ್ 2020, 8:54 IST
ಪ್ರಣವ್ ಮುಖರ್ಜಿ
ಪ್ರಣವ್ ಮುಖರ್ಜಿ   

ವಾಷಿಂಗ್ಟನ್: ಭಾರತದ ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರು ಜಾಗತಿಕ ಸವಾಲುಗಳನ್ನು ಭಾರತ ಮತ್ತು ಅಮೆರಿಕ ಒಟ್ಟಾಗಿ ಎದುರಿಸುವುದರ ಪ್ರಾಮುಖ್ಯತೆಯನ್ನು ಮನಗಂಡಿದ್ದರು ಎಂದು ಅಮೆರಿಕ ಚುನಾವಣೆಯಲ್ಲಿ ಡೆಮಾಕ್ರಟಿಕ್‌ ಪಕ್ಷದ ಅಭ್ಯರ್ಥಿ ಜೋ ಬೈಡನ್ ಅವರು ಹೇಳಿದ್ದಾರೆ. ಮುಖರ್ಜಿ ಅವರ ನಿಧನಕ್ಕೂ ಅವರು ಸಂತಾಪ ವ್ಯಕ್ತಪಡಿಸಿದ್ದಾರೆ.

ಪ್ರಣವ್ ಅವರು ಧರ್ಮನಿಷ್ಠ ಸಾರ್ವಜನಿಕ ಸೇವಕ. ಜಾಗತಿಕ ಸವಾಲುಗಳನ್ನು ಉಭಯ ರಾಷ್ಟ್ರಗಳು ಒಟ್ಟಾಗಿ ಎದುರಿಸುವ ಅಗತ್ಯವನ್ನು ತಿಳಿದಿದ್ದರು. ಅವರ ಅಗಲಿಕೆ ನೋವಿನ ಸಂಗತಿ ಎಂದು ಬೈಡನ್ ಪ್ರತಿಕ್ರಿಯಿಸಿದರು.

ಅಲ್ಲದೆ, ಅಮೆರಿಕದ ಇತರೆ ಪ್ರಮುಖ ನಾಯಕರು ಹಾಗೂ ಸಂಘಟನೆಗಳು ಕೂಡಾ ಪ್ರಣವ್ ಮುಖರ್ಜಿ ಅವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದು, ಭಾರತದ ಮುತ್ಸದ್ಧಿ ರಾಜಕಾರಣಿಯಾಗಿ ಅವರು ಇತಿಹಾಸದ ಪುಟ ಸೇರಲಿದ್ದಾರೆ ಎಂದು ಪ್ರತಿಕ್ರಿಯಿಸಿವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.