ADVERTISEMENT

ಕೋವಿಡ್‌ ಲಸಿಕೆ: ಮೊದಲ ಡೋಸ್‌ ಹಾಕಿಸಿಕೊಂಡ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ನಖ್ವಿ

ಏಜೆನ್ಸೀಸ್
Published 2 ಮಾರ್ಚ್ 2021, 8:52 IST
Last Updated 2 ಮಾರ್ಚ್ 2021, 8:52 IST
ಮುಖ್ತಾರ್‌ ಅಬ್ಬಾಸ್‌ ನಖ್ವಿ (ಟ್ವಿಟರ್‌ ಚಿತ್ರ)
ಮುಖ್ತಾರ್‌ ಅಬ್ಬಾಸ್‌ ನಖ್ವಿ (ಟ್ವಿಟರ್‌ ಚಿತ್ರ)   

ರಾಂಪುರ (ಉತ್ತರ ಪ್ರದೇಶ): ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಮುಖ್ತಾರ್‌ ಅಬ್ಬಾಸ್‌ ನಖ್ವಿ ಅವರು ಇಲ್ಲಿನದಾಲ್ಮಿಯಾ ಆಸ್ಪತ್ರೆಯಲ್ಲಿ ಮಂಗಳವಾರ ಕೋವಿಡ್-‌19 ಲಸಿಕೆಯ ಮೊದಲ ಡೋಸ್‌ ಹಾಕಿಸಿಕೊಂಡರು.

ಈಬಗ್ಗೆ ಟ್ವಿಟರ್‌ನಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು, ʼರಾಂಪುರದ (ಉತ್ತರಪ್ರದೇಶ) ದಾಲ್ಮಿಯಾ ಆಸ್ಪತ್ರೆಯಲ್ಲಿ ಇಂದು ಕೊರೊನಾ ಲಸಿಕೆಯನ್ನು ಹಾಕಿಸಿಕೊಂಡೆ.#IndiaFightsCorona #LargestVaccineDriveʼ ಎಂದು ಬರೆದುಕೊಂಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ದೆಹಲಿಯಲ್ಲಿರುವ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ (ಏಮ್ಸ್‌) ಸೋಮವಾರ ಹಾಗೂ ಆರೋಗ್ಯ ಸಚಿವ ಹರ್ಷವರ್ಧನ್‌ ಅವರು ಇಂದುಪತ್ನಿ ನೂತನ್ ಗೋಯಲ್ ಅವರೊಂದಿಗೆದೆಹಲಿಯ ಹಾರ್ಟ್‌ ಅಂಡ್ ಲಂಗ್‌ ಇನ್‌ಸ್ಟಿಟ್ಯೂಟ್‌ನಲ್ಲಿ ಮೊದಲ ಡೋಸ್‌ ಹಾಕಿಸಿಕೊಂಡರು.

ADVERTISEMENT

ಭಾರತದಲ್ಲಿ ಮೂರನೇ ಹಂತದ ಲಸಿಕೆ ಅಭಿಯಾನವನ್ನು ಮಾರ್ಚ್‌ 1ರಿಂದ ಆರಂಭಿಸಲಾಗಿದೆ.

ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ ಕೋವಿಡ್‌–19 ದೃಢಪಟ್ಟ 12,286 ಹೊಸ ಪ್ರಕರಣಗಳು ದಾಖಲಾಗಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ 1,11,24,527 ತಲುಪಿದೆ. ಇದರಲ್ಲಿ 1,57,248 ಮಂದಿ ಕೋವಿಡ್‌ನಿಂದ ಮೃತಪಟ್ಟಿದ್ದಾರೆ.1,07,98,921 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು, ಇನ್ನೂ1,68,358 ಪ್ರಕರಣಗಳು ಸಕ್ರಿಯವಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.