ADVERTISEMENT

ಉತ್ತರ ಪ್ರದೇಶ: ಶಾಸಕ ಸ್ಥಾನದಿಂದ ಅಬ್ಬಾಸ್‌ ಅನ್ಸಾರಿ ಅನರ್ಹ

ಪಿಟಿಐ
Published 1 ಜೂನ್ 2025, 16:00 IST
Last Updated 1 ಜೂನ್ 2025, 16:00 IST
.
.   

ಲಖನೌ: ಉತ್ತರ ಪ್ರದೇಶದಲ್ಲಿ ಅನರ್ಹಗೊಂಡ ಶಾಸಕರ ಪಟ್ಟಿಗೆ ಸುಹೇಲ್‌ದೇವ್‌ ಭಾರತೀಯ ಸಮಾಜ ಪಕ್ಷದ (ಎಸ್‌ಬಿಎಸ್‌ಪಿ)  ಮವೂ ಕ್ಷೇತ್ರದ ಶಾಸಕ ಅಬ್ಬಾಸ್‌ ಅನ್ಸಾರಿ ಅವರು ಸೇರ್ಪಡೆಯಾಗಿದ್ದಾರೆ.

ದ್ವೇಷ ಭಾಷಣ ಪ್ರಕರಣದಲ್ಲಿ ಎರಡು ವರ್ಷ ಜೈಲು ಶಿಕ್ಷೆಗೆ ಗುರಿಯಾದ ಕಾರಣ ಭೂಗತ ಪಾತಕಿ, ರಾಜಕಾರಣಿ ಮುಖ್ತಾರ್‌ ಅನ್ಸಾರಿ ಅವರ ಪುತ್ರ ಅಬ್ಬಾಸ್‌ ಅವರನ್ನು ಉತ್ತರ ಪ್ರದೇಶ ವಿಧಾನಸಭೆಯ ಸದಸ್ಯ ಸ್ಥಾನದಿಂದ ಅನರ್ಹಗೊಳಿಸಲಾಗಿದೆ. ಪ್ರಜಾಪ್ರತಿನಿಧಿ ಕಾಯ್ದೆಯ ಅಡಿಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

2022ರ ವಿಧಾನಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸುವ ಮೂಲಕ ಅಬ್ಬಾಸ್ ಅನ್ಸಾರಿ ಅವರು ಮೊದಲ ಬಾರಿಗೆ ವಿಧಾನಸಭೆಯನ್ನು ಪ್ರವೇಶಿಸಿದ್ದರು.

ADVERTISEMENT

ಎಸ್‌ಬಿಎಸ್‌ಪಿ ಪಕ್ಷವು ಸದ್ಯ ಆಡಳಿತಾರೂಢ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿದೆ. 

ಉತ್ತರ ಪ್ರದೇಶ: 18ನೇ ವಿಧಾನಸಭೆಯಲ್ಲಿ ಅನರ್ಹಗೊಂಡ ಶಾಸಕರು

  • ಆಜಂ ಖಾನ್‌ (ಸಮಾಜವಾದಿ ಪಕ್ಷ

  • ಅಬ್ದುಲ್ಲಾ ಆಜಂ ಖಾನ್‌ (ಸಮಾಜವಾದಿ ಪಕ್ಷ)

  • ಹಾಜಿ ಇರ್ಫಾನ್‌ ಸೋಲಂಕಿ (ಸಮಾಜವಾದಿ ಪಕ್ಷ)

  • ವಿಕ್ರಮ್‌ ಸಿಂಗ್‌ (ಸಮಾಜವಾದಿ ಪಕ್ಷ)

  • ರಾಮ್‌ದುಲಾರ್‌ (ಬಿಜೆಪಿ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.