ADVERTISEMENT

ವಿಷಕಾರಿ ಅಂಶ: ಪಟಾಕಿ ಮಾರಾಟ ಮಾಡದಂತೆ ಮನವಿ

ಪಿಟಿಐ
Published 23 ಅಕ್ಟೋಬರ್ 2022, 11:19 IST
Last Updated 23 ಅಕ್ಟೋಬರ್ 2022, 11:19 IST
   

ಮುಂಬೈ : ರಾಸಾಯನಿಕ ಪ‍ರೀಕ್ಷೆಯಲ್ಲಿ ಪಟಾಕಿಗಳಲ್ಲಿ ವಿಷಕಾರಿ ಅಂಶ ಪತ್ತೆಯಾದ ಬಳಿಕ ಪೊಲೀಸ್‌ ಮತ್ತು ಮಹಾರಾಷ್ಟ್ರ ಸರ್ಕಾರಕ್ಕೆ ಮುಂಬೈ ಮೂಲದ ಆವಾಜ್‌ ಫೌಂಡೇಶನ್ ಪತ್ರ ಬರೆದು,ಸುಪ್ರೀಂ ಕೋರ್ಟ್ ನಿಷೇಧಿಸಿರುವ ರಾಸಾಯನಿಕ ಒಳಗೊಂಡಿರುವ ಪಟಾಕಿಗಳ ಮಾರಾಟ ಅಥವಾ ಬಳಸದಂತೆ ನೋಡಿಕೊಳ್ಳಬೇಕು ಎಂದು ಮನವಿ ಮಾಡಿದೆ.

ಸ್ವಯಂ ಸೇವಾ ಸಂಸ್ಥೆಯು ಗುರುವಾರ ಪಟಾಕಿಗಳಲ್ಲಿ ಶಬ್ಧ ಮಟ್ಟ ಮತ್ತು ರಾಸಾಯನಿಕ ಅಂಶ ಬಗ್ಗೆ ತಿಳಿಯಲು ಪ್ರತ್ಯೇಕ ಪರೀಕ್ಷೆಗಳನ್ನು ನಡೆಸಿತ್ತು.

ಸಂಸ್ಥೆಯು ಮಹಾರಾಷ್ಟ್ರ ಮಾಲಿನ್ಯ ನಿಯಂತ್ರಣ ಮಂಡಳಿ (ಎಂಪಿಸಿಬಿ) ಜೊತೆಗೆ ಪಟಾಕಿಗಳಲ್ಲಿ ಶಬ್ದ ಮಟ್ಟ ಪರಿಶೀಲಿಸಿದ ವೇಳೆ ಅದೆಲ್ಲವೂ ಅನುಮತಿಸಿರುವ ಡೆಸಿಬಲ್‌ ಮಿತಿ 120 ರೊಳಗೆ ಬಂದಿದೆ ಎಂದು ಪ್ರತಿಷ್ಠಾನದ ಸಂಚಾಲಕ ಸುಮೈರಾ ಅಬ್ದುಲಾಲಿ ತಿಳಿಸಿದ್ದಾರೆ.

ADVERTISEMENT

ಸಂಸ್ಥೆಯು ಸ್ವತಂತ್ರವಾಗಿ ನಡೆಸಿದ ಪರೀಕ್ಷೆಯಲ್ಲಿ ಪಟಾಕಿಗಳಲ್ಲಿ ಆರ್ಸೆನಿಕ್, ಸಲ್ಫರ್, ಬೇರಿಯಂ ಮತ್ತು ಕ್ಲೋರಿನ್‌ನಂತಹ ವಿಷಕಾರಿ ರಾಸಾಯನಿಕ ಇರುವುದು ಪತ್ತೆಯಾಗಿದೆ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.