ADVERTISEMENT

CM ಫಡಣವೀಸ್ ಕಚೇರಿ ಸ್ಫೋಟದ ಬೆದರಿಕೆ: ಪಾಕ್ ಸಂಖ್ಯೆಯಿಂದ ಮುಂಬೈ ಪೊಲೀಸರಿಗೆ ಸಂದೇಶ

ಪಿಟಿಐ
Published 28 ಫೆಬ್ರುವರಿ 2025, 11:19 IST
Last Updated 28 ಫೆಬ್ರುವರಿ 2025, 11:19 IST
<div class="paragraphs"><p>ಬಾಂಬ್ ಬೆದರಿಕೆ</p></div>

ಬಾಂಬ್ ಬೆದರಿಕೆ

   

(ಸಾಂದರ್ಭಿಕ ಚಿತ್ರ)

ಮುಂಬೈ: ಮಹಾರಾಷ್ಟ್ರದ ಮುಂಬೈನಲ್ಲಿರುವ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಅವರ ಕಚೇರಿಯನ್ನು ಸ್ಫೋಟಿಸುವುದಾಗಿ ಮುಂಬೈ ಸಂಚಾರ ಠಾಣೆ ಪೊಲೀಸರ ಸಹಾಯವಾಣಿಗೆ ಪಾಕಿಸ್ತಾನದ ಸಂಖ್ಯೆಯಿಂದ ಬೆದರಿಕೆ ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ಸಂದೇಶ ಕಳುಹಿಸಿದ ವ್ಯಕ್ತಿ ತನ್ನನ್ನು ಮಲಿಕ್‌ ಶಹಬಾಜ್ ರಾಜಾ ಎಂದು ಹೇಳಿಕೊಂಡಿದ್ದಾನೆ. ಈ ಕುರಿತಂತೆ ವರ್ಲಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಬೆದರಿಕೆ ಸಂದೇಶ ಇಂಗ್ಲಿಷ್‌ನಲ್ಲಿದೆ. ಅನಾಮಧೇಯ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ’ ಎಂದು ಪೊಲೀಸರು ಹೇಳಿದ್ದಾರೆ. ಮುಂಬೈನ ಸಂಚಾರ ಠಾಣೆ ಪೊಲೀಸರಿಗೆ ಇಂಥ ಬೆದರಿಕೆ ಸಂದೇಶ ಈ ಹಿಂದೆಯೂ ಬಂದಿದ್ದನ್ನು ಇಲ್ಲಿ ಸ್ಮರಿಸಬಹುದು.

ಕಳೆದ ನವೆಂಬರ್‌ನಲ್ಲಿ ನಟ ಸಲ್ಮಾನ್‌ ಖಾನ್‌ಗೆ ಬಂದಿದ್ದ ಬೆದರಿಕೆ ಕರೆಯಲ್ಲಿ ₹5ಕೋಟಿಗೆ ಬೇಡಿಕೆ ಇಡಲಾಗಿತ್ತು. ಪ್ರಧಾನಿ ನರೇಂದ್ರ ಮೋದಿಗೆ ಬಂದಿದ್ದ ಬೆದರಿಕೆ ಕರೆಯ ತನಿಖೆ ನಡೆಸಿದ್ದ ಪೊಲೀಸರು, ಜಾರ್ಖಂಡ್ ಮೂಲದ 37 ವರ್ಷದ ವ್ಯಕ್ತಿಯನ್ನು ರಾಜಸ್ಥಾನದಲ್ಲಿ ಬಂಧಿಸಿದ್ದರು. ಫೆ. 21ರಂದು ಬಂದಿದ್ದ ಇಂಥದ್ದೇ ಸಂದೇಶದಲ್ಲಿ, ಉಪಮುಖ್ಯಮಂತ್ರಿ ಏಕನಾಥ ಶಿಂದೆ ಅವರ ಕಾರನ್ನು ಸ್ಫೋಟಿಸುವ ಬೆದರಿಕೆ ಒಡ್ಡಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬುಲ್ಧಾನಾದಲ್ಲಿ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.