ಮುಂಬೈ: ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಮುಂಬೈನ ವಿವಿಧೆಡೆ ನಡೆದ ಮೊಸರು ಗಡಿಗೆ ಉತ್ಸವದ ಸಂದರ್ಭದಲ್ಲಿ ಸಂಭವಿಸಿದ ಅವಘಡದಲ್ಲಿ ಇಬ್ಬರು ಮೃತಪಟ್ಟು, 300ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಈಶಾನ್ಯ ಮುಂಬೈನ ಮಾನ್‌ಕುರ್ದ್ ಪ್ರದೇಶದಲ್ಲಿ ಮೊಸರು ಗಡಿಗೆಯನ್ನು ಹಗ್ಗಕ್ಕೆ ಕಟ್ಟುತ್ತಿದ್ದಾಗ ಆಯತಪ್ಪಿ ಕೆಳಗೆ ಬಿದ್ದು ಜಗಮೋಹನ್ ಶಿವಕುಮಾರ್ ಚೌಧರಿ (32) ಎಂಬವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅಂಧೇರಿಯ ಆದರ್ಶ ನಗರ ಎಂಬಲ್ಲಿ ಮೊಸರು ಗಡಿಗೆ ಉತ್ಸವ ನೋಡಲು ಬಂದಿದ್ದ ರೋಹನ್ ಮೋಹನ್ ಮಾಳ್ವಿ (14) ಎಂಬ ಬಾಲಕ ಕುಸಿದು ಬಿದ್ದು ಮೃತಪಟ್ಟಿದ್ದಾನೆ. ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ತಾನಾಜಿ ನಗರದ 9 ವರ್ಷದ ಬಾಲಕ ಆರ್ಯನ್ ಯಾದವ್ ಸ್ಥಿತಿ ಗಂಭೀರವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮುಂಬೈನ ವಿವಿಧೆಡೆ ಮೊಸರು ಗಡಿಗೆ ಉತ್ಸವದ ಸಂದರ್ಭದಲ್ಲಿ ಉಂಟಾದ ಅವಘಡದಲ್ಲಿ ಇದುವರೆಗೆ 318 ಜನರು ಗಾಯಗೊಂಡಿದ್ದಾರೆ. ಠಾಣೆಯಲ್ಲಿ ಮಾನವ ಪಿರಮಿಡ್ ನಿರ್ಮಿಸುತ್ತಿದ್ದಾಗ ಆಯತಪ್ಪಿ ಕೆಳಗೆ ಬಿದ್ದು, 22 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಕೆಲವರ ಬೆನ್ನುಮೂಳೆ, ಕುತ್ತಿಗೆ, ಭುಜ, ತಲೆ, ಸೊಂಟದ ಭಾಗಕ್ಕೆ ಗಂಭೀರ ಗಾಯಗಳಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.