
ಪ್ರಜಾವಾಣಿ ವಾರ್ತೆ
ಮುಂಬೈ: ಮಹಾರಾಷ್ಟ್ರ ಮತ್ತು ಮುಂಬೈನಲ್ಲಿ ಜಪ್ತಿ ಮಾಡಲಾಗಿದ್ದ 341 ಕೆ.ಜಿ ನಿಷೇಧಿತ ವಸ್ತುಗಳು ಸೇರಿದಂತೆ 1835 ಕೆ.ಜಿ ಮೆಫೆಡ್ರೋನ್ ಅನ್ನು ಮಾದಕವಸ್ತುಗಳ ನಿಯಂತ್ರಣ ದಳದ(ಎನ್‌ಸಿಬಿ) ಮುಂಬೈ ಘಟಕವು ನಾಶ ಮಾಡಿದೆ.
ಈ ಪ್ರಕರಣಗಳಲ್ಲಿ 16 ಜನರನ್ನು ಬಂಧಿಸಲಾಗಿದೆ ಎಂದು ಎನ್‌ಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.
ಜಪ್ತಿ ಮಾಡಲಾಗಿದ್ದ ಮಾದಕವಸ್ತುಗಳ ಆಧಾರದಲ್ಲಿ ನಡೆದ ತನಿಖೆಯಲ್ಲಿ ವಿದೇಶಿಗರು ಸೇರಿದಂತೆ ಹಲವರನ್ನು ಬಂಧಿಸಲಾಗಿದೆ. ಅಂತರರಾಷ್ಟ್ರೀಯ ಮಾದಕವಸ್ತುಗಳ ಜಾಲವನ್ನು ಬೇಧಿಸಲಾಗಿದೆ.
ಪ್ರಕರಣದ ಬಗ್ಗೆ ಪರಿಶೀಲಿಸಿ, ವಿಚಾರಣಾ ಪೂರ್ವ ಮಾದಕವಸ್ತುಗಳ ವಿಲೇವಾರಿಗೆ ನಿರ್ಧರಿಸಲಾಯಿತು. ಬಳಿಕ ಇತರ ರಾಸಾಯನಿಕಗಳೊಂದಿಗೆ ವಿಲೇವಾರಿಗೊಳಿಸಲಾಯಿತು.