ADVERTISEMENT

ಮುಂಬೈ | 12 ಗಂಟೆಗಳಲ್ಲಿ 215.8 ಮಿ.ಮೀ ಮಳೆ

ಪಿಟಿಐ
Published 6 ಆಗಸ್ಟ್ 2020, 11:24 IST
Last Updated 6 ಆಗಸ್ಟ್ 2020, 11:24 IST
ಮುಂಬೈನಲ್ಲಿ ಗುರುವಾರ ಸುರಿದ ಬಿರುಗಾಳಿ ಸಹಿತ ಮಳೆಯಿಂದಾಗಿ ಸಮುದ್ರದ ಅಲೆಗಳು ಉಕ್ಕುತ್ತಿರುವ ದೃಶ್ಯ
ಮುಂಬೈನಲ್ಲಿ ಗುರುವಾರ ಸುರಿದ ಬಿರುಗಾಳಿ ಸಹಿತ ಮಳೆಯಿಂದಾಗಿ ಸಮುದ್ರದ ಅಲೆಗಳು ಉಕ್ಕುತ್ತಿರುವ ದೃಶ್ಯ   

ಮುಂಬೈ: ಕಳೆದ ಎರಡು ದಿನಗಳಿಂದ ಮುಂಬೈನಲ್ಲಿ ಭಾರಿ ಮಳೆಯಾಗುತ್ತಿದ್ದು, ಬುಧವಾರ ಒಂದೇ ದಿನ ಹನ್ನೆರಡು ಗಂಟೆಗಳಲ್ಲಿ ಬಿರುಗಾಳಿ ಸಹಿತ ದಾಖಲೆ ಪ್ರಮಾಣದಲ್ಲಿ ಮಳೆ ಸುರಿದಿದೆ.

ಬೃಹನ್‌ ಮುಂಬೈ ಮಹಾನಗರ ಪಾಲಿಕೆ ಮಾಹಿತಿ ಪ್ರಕಾರ ಒಂದು ದಿನದಲ್ಲಿ 215.8 ಮಿಮೀ ಮಳೆಯಾಗಿದೆ. ಪೂರ್ವ ಮುಂಬೈ ಉಪನಗರ ವ್ಯಾಪ್ತಿಯಲ್ಲಿ 101.9 ಮೀ ಹಾಗೂ ಪಶ್ಚಿಮ ಭಾಗದಲ್ಲಿ 76.03 ಮಿ.ಮೀ ಮಳೆಯಾಗಿದೆ. ಮಲಬಾರ್ ಹಿಲ್‌ ಮತ್ತು ಪೆದ್ದಾರ್ ರಸ್ತೆ ಸೇರಿದಂದೆ ‘ಡಿ‘ವಾರ್ಡ್‌ನಲ್ಲಿ 309 ಮಿ.ಮೀ ಮಳೆಯಾದ ವರದಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT