ADVERTISEMENT

ಮುಂಬೈ: ಎ.ಸಿ ಡಬಲ್ ಡೆಕರ್‌ ಬಸ್‌ಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2022, 13:33 IST
Last Updated 18 ಆಗಸ್ಟ್ 2022, 13:33 IST
ಸ್ವಿಚ್‌ ಇಐವಿ22 ಡಬಲ್ ಡೆಕರ್‌ ಬಸ್‌
ಸ್ವಿಚ್‌ ಇಐವಿ22 ಡಬಲ್ ಡೆಕರ್‌ ಬಸ್‌   

ಮುಂಬೈ: ದೇಶದ ಮೊದಲ ಹವಾನಿಯಂತ್ರಿತ ಎಲೆಕ್ಟ್ರಿಕ್‌ ಡಬಲ್ ಡೆಕರ್‌ ಬಸ್‌ಗೆ ಕೇಂದ್ರ ಹೆದ್ದಾರಿ ಮತ್ತು ಸಾರಿಗೆ ಸಚಿವ ನಿತಿನ್‌ ಗಡ್ಕರಿ ಅವರು ಗುರುವಾರ ಮುಂಬೈನಲ್ಲಿ ಚಾಲನೆ ನೀಡಿದರು.

ಬೃಹನ್‌ ಮುಂಬೈ ವಿದ್ಯುತ್‌ ಸರಬರಾಜು ಮತ್ತು ಸಾರಿಗೆ ಸಂಸ್ಥೆ (ಬಿಇಎಸ್‌ಟಿ) ಅಧೀನದಲ್ಲಿ ಈ ಬಸ್‌ ಕಾರ್ಯಾಚರಿಸಲಿದೆ.

ಅಶೋಕ್‌ ಲೇಲ್ಯಾಂಡ್‌ನ ಸ್ವಿಚ್‌ ಇಐವಿ22 ಬಸ್‌ ಅನ್ನು ಭಾರತದಲ್ಲೇ ವಿನ್ಯಾಸಗೊಳಿಸಿ ನಿರ್ಮಿಸಲಾಗಿದೆ.

ADVERTISEMENT

‘ದೇಶದ ಸಾರಿಗೆ ವ್ಯವಸ್ಥೆಯಲ್ಲಿ ಬದಲಾವಣೆ ತರುವ ಅಗತ್ಯ ಇದೆ. ಪ್ರಯಾಣಿಕರ ಸಾಂದ್ರತೆಯನ್ನು ಗಮನದಲ್ಲಿಟ್ಟುಕೊಂಡು ಎಲೆಕ್ಟ್ರಿಕ್‌ ವಾಹನಗಳಿಗೆ ಉತ್ತೇಜನ ನೀಡುವ ಗುರಿಯನ್ನು ಸರ್ಕಾರ ಹೊಂದಿದೆ’ ಎಂದು ಗಡ್ಕರಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.