ADVERTISEMENT

ಸೊಮಾಲಿಯಾ ಮಾದರಿ ದಾಳಿ ಭಾರತದಲ್ಲಿ ನಡೆಯದಿರಲಿ; ಮುಂಬೈ ಪೊಲೀಸರಿಗೆ ಸಂದೇಶ

ಪಿಟಿಐ
Published 26 ಆಗಸ್ಟ್ 2022, 12:29 IST
Last Updated 26 ಆಗಸ್ಟ್ 2022, 12:29 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಮುಂಬೈ: ‘ಸೊಮಾಲಿಯಾದಲ್ಲಿ ನಡೆದ ಮಾದರಿಯ ದಾಳಿ ಭಾರತದಲ್ಲಿ ನಡೆಯುವುದನ್ನು ತಪ್ಪಿಸಲು ಮುನ್ನೆಚ್ಚರಿಕೆ ವಹಿಸಿ’ ಎಂಬ ಎಚ್ಚರಿಕೆ ಸಂದೇಶವೊಂದು ಮುಂಬೈನ ಸಂಚಾರ ಪೊಲೀಸರಿಗೆ ಅಂತರರಾಷ್ಟ್ರೀಯ ಮೊಬೈಲ್ ಸಂಖ್ಯೆಯಿಂದ ಬಂದಿದೆ.

ಶುಕ್ರವಾರ ಅಧಿಕಾರಿಯೊಬ್ಬರು ಈ ಮಾಹಿತಿ ನೀಡಿದ್ದಾರೆ. ಕಳೆದ ವಾರ ಸಂಚಾರ ಪೊಲೀಸರ ಸಹಾಯವಾಣಿ ಸಂಖ್ಯೆಗೆ ಈ ಕುರಿತು ಹಲವು ಸಂದೇಶಗಳು ಬಂದಿವೆ. ಇದರಲ್ಲಿ 26/11 ಮಾದರಿಯಲ್ಲಿ ದಾಳಿ ನಡೆಸುವುದೂ ಸೇರಿದೆ ಎಂದು ಅವರು ತಿಳಿಸಿದರು.

ಈಚೆಗೆ ಬಂದಿರುವ ಸಂದೇಶದಲ್ಲಿ ನಿರ್ದಿಷ್ಟ ಬೆದರಿಕೆ ಇಲ್ಲ. ಆದರೂ ಈ ಬಗ್ಗೆ ತನಿಖೆ ನಡೆದಿದೆ. ಸೊಮಾಲಿಯಾದ ರಾಜಧಾನಿ ಮೊಗದಿಶುವಿನ ಹಯಾತ್ ಹೋಟೆಲ್‌ ಮೇಲೆ ಉಗ್ರ ಸಂಘಟನೆ ಅಲ್‌ ಶಬಾಬ್‌ ಈಚೆಗೆ ದಾಳಿ ನಡೆಸಿತ್ತು. ಆದರೆ, ಈಗ ಪೊಲೀಸ್‌ ಸಹಾಯವಾಣಿಗೆ ಬಂದಿರುವ ಎಚ್ಚರಿಕೆ ಸಂದೇಶದಲ್ಲಿ ದಾಳಿಯ ಯಾವ ಘಟನೆ ಉಲ್ಲೇಖಿಸಲಾಗಿದೆ ಎಂಬುದು ಸ್ಪಷ್ಟವಾಗಿಲ್ಲ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.