ADVERTISEMENT

ಟ್ವಿಟರ್‌ನಲ್ಲಿ ಏಕಾಏಕಿ ಟ್ರೆಂಡ್‌ ಆದ ಮುಂಬೈನ ಬಾಂದ್ರಾ!

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2020, 14:37 IST
Last Updated 14 ಏಪ್ರಿಲ್ 2020, 14:37 IST
   

ಕರೋನ ವೈರಸ್‌ ನಿಯಂತ್ರಿಸುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ದೇಶಾದ್ಯಂತ ಲಾಕ್‌ಡೌನ್ ಅನ್ನು ಮೇ 3 ರವರೆಗೆ ವಿಸ್ತರಿಸಿರುವ ನಿರ್ಧಾರದಿಂದ ಕೆರಳಿದ ವಲಸೆ ಕಾರ್ಮಿಕರು, ದಿನಗೂಲಿಗಳು ಮಂಗಳವಾರ ಮುಂಬೈನ ಬಾಂದ್ರಾ ರೈಲ್ವೇ ನಿಲ್ದಾಣದಲ್ಲಿ ಅತ್ತ ಪ್ರತಿಭಟನೆಗೆ ಮುಂದಾದಗುತ್ತಲೇ ಇತ್ತ ಟ್ವಿಟರ್‌ನಲ್ಲಿ #Bandra ಹ್ಯಾಷ್‌ಟ್ಯಾಗ್‌ ಟ್ರೆಂಡ್‌ ಆಗಿದೆ.

#Bandra, #SendUsBackHome, #Migrant, #MaharashtraGovernment ವಿಷಯಗಳು ಮಂಗಳವಾರ ಸಂಜೆ ಭಾರಿ ಟ್ರೆಂಡ್‌ ಆದವು. #Bandra ಹ್ಯಾಷ್‌ ಟ್ಯಾಂಗ್‌ ಒಂದರಲ್ಲೇ ಸಂಜೆ 7.30ರ 51 ಸಾವಿರ ಟ್ವೀಟ್‌ಗಳು ಬಂದಿದ್ದವು.

ಬಾಂದ್ರಾ ರೈಲು ನಿಲ್ದಾಣದ ಬಳಿ ನಡೆದ ಘಟನೆಯ ಹಲವು ವಿಡಿಯೋಗಳು, ಫೋಟೊಗಳನ್ನು ನೆಟ್ಟಿಗರು ಟ್ವಿಟರ್‌ನಲ್ಲಿ ಹಂಚಿಕೊಂಡರು.
ಬಾಂದ್ರಾ ಘಟನೆಗೆ ಕಾರಣರು ಯಾರು ಎಂಬ ಪ್ರಶ್ನೆಗಳೂ ಟ್ವಿಟರ್‌ನಲ್ಲಿ ಕೇಳಿ ಬಂದಿವೆ. ಹಲವರು ಇದು ಗುಪ್ತಚರ ಇಲಾಖೆಯ ವೈಫಲ್ಯ ಎಂದು ಅಭಿಪ್ರಾಯಪಟ್ಟಿದ್ದಾರೆ.

ADVERTISEMENT

ಆದಿತ್ಯ ಟ್ವೀಟ್‌ಗೆ ಟೀಕೆ

ಇದೇ ವೇಳೆ ಮಹಾರಾಷ್ಟ್ರ ಸಿಎಂ ಉದ್ಧವ್‌ ಠಾಕ್ರೆ ಪುತ್ರ ಆದಿತ್ಯ ಠಾಕ್ರೆ ಅವರು ಮಾಡಿದ್ದ ಟ್ವೀಟ್‌ ಕೂಡ ಇದೇ ಹ್ಯಾಷ್‌ ಟ್ಯಾಗ್‌ ಅಡಿ ಟೀಕೆಗೆ ಗುರಿಯಾಯಾಯಿತು. 'ಬಾಂದ್ರಾ ನಿಲ್ದಾಣದ ಬಳಿ ಇಂದು ನಡೆದ ಈ ಘಟನೆಗೆ ಕೇಂದ್ರ ಸರ್ಕಾರ, ಮೋದಿ ಅವರೇ ಕಾರಣ. ಅವರು ಊರುಗಳಿಗೆ ತೆರಳಲು ಸಾರಿಗೆ ವ್ಯವಸ್ಥೆ ಮಾಡದ ಕಾರಣ ಇಂದು ಈ ಘಟನೆ ನಡೆದಿದೆ,’ ಎಂದು ಅವರು ಟೀಕಿಸಿದ್ದರು.

ಆದಿತ್ಯ ಆವರ ಈ ಟ್ವೀಟ್‌ಗೆ ಟೀಕೆ ವ್ಯಕ್ತವಾಗಿದೆ. ಮಾರ್ಚ್‌ 29ರಂದು ಅವರು ವಲಸಿಗರ ಕುರಿತು ಮಾಡಿದ್ದ ಟ್ವೀಟನ್ನು ಹಲವರು ನೆನಪಿಸಿದ್ದಾರೆ. ‘ಈ ಪರಿಸ್ಥಿತಯಲ್ಲಿ ವಲಸಿಗರು ಎಲ್ಲಿಗೂ ಹೊಗದಂತೆ ಸಿಎಂ ಮನವಿ ಮಾಡಿರುವುದಾಗಿಯೂ, ಜಿಲ್ಲಾಧಿಕಾರಿಗಳು ವಲಸಿಗರಿಗೆ ನೆರವಾಗಬೇಕಾಗಿಯೂ,’ ಅವರು ಅಂದು ಟ್ವೀಟ್‌ ಮಾಡಿದ್ದರು.
ಎರಡೂ ಟ್ವೀಟ್‌ಗಳ ಸ್ಕ್ರೀನ್‌ಶಾಟ್‌ಗಳನ್ನು ಒಟ್ಟಿಗೆ ಟ್ವಿಟರ್‌ನಲ್ಲಿ ಹಾಕಿ ಹಲವರು ಟೀಕಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.